ಬ್ರಹ್ಮಾವರ: ಮಹಿಳೆ ನಾಪತ್ತೆ

ಬ್ರಹ್ಮಾವರ ನ.16 (ಉಡುಪಿ ಟೈಮ್ಸ್ ವರದಿ) : ತಾಲೂಕಿನ ವಾರಂಬಳ್ಳಿ ಗ್ರಾಮದ ಮನೆಯಿಂದ 74 ವರ್ಷದ ಮಹಿಳೆಯೊಬ್ಬರು ನ.14 ರಿಂದ ನಾಪತ್ತೆಯಾಗಿದ್ದಾರೆ.

ವಾರಂಬಳ್ಳಿ ಗ್ರಾಮದ ನಿವಾಸಿ ವನಜ ಶೆಟ್ಟಿ (74) ನಾಪತ್ತೆಯಾದವರು.

ಇವರಿಗೆ ಮರೆವು ಖಾಯಿಲೆ ಇದ್ದು, ನ.14 ರ ಬೆಳಿಗ್ಗೆ ಮನೆಯಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ವನಜ ಶೆಟ್ಟಿ ಅವರ ಮಗ ರವಿರಾಜ್ ಶೆಟ್ಟಿ ಜಿ. ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

error: Content is protected !!