ತೆಕ್ಕಟ್ಟೆ: ದಡಕ್ಕೆ ಅಪ್ಪಳಿಸಿದ ಮೀನುಗಾರಿಕಾ ಬೋಟ್ 6 ಮೀನುಗಾರರು ಪಾರು

ತೆಕ್ಕಟ್ಟೆ ಕೊಮೆ ನ.15 : ಮೀನುಗಾರಿಕಾ ಬೋಟ್ ವೊಂದು  ಚಾಲಕನ ನಿಯಂತ್ರಣ ತಪ್ಪಿ ಕಡಲ ತೀರಕ್ಕೆ ಬಂದು ಅಪ್ಪಳಿಸಿದ ಘಟನೆ ನಿನ್ನೆ ತಡರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ.

ಬೋಟಿನಲ್ಲಿ ಸುಮಾರು 6 ಮಂದಿ ಮೀನುಗಾರರಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಲಾಗಿದೆ.  

ಗಂಗೊಳ್ಳಿ ಮೂಲದ ಬೋಟ್ ಎನ್ನಲಾಗಿದ್ದು, ಬೋಟ್ ಸುರಕ್ಷಿತವಾಗಿ ನೀರಿನಿಂದ ಮೇಲೆತ್ತುವ ನಿಟ್ಟಿನಿಂದ ಬೋಟ್ ಒಳಗಿನ ಸರಕುಗಳನ್ನು ಹೊರ ತೆಗೆಯುವಲ್ಲಿ ಮೀನುಗಾರರು ಶ್ರಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published.

error: Content is protected !!