ವರಾನ್ವೇಷಣೆಯಲ್ಲಿ 10 ಸಾವಿರಕ್ಕೂ ಅಧಿಕ ಯುವಕರು ಬಾಗಿ- ಟ್ರಾಫಿಕ್ ಜಾಮ್…

ಮಂಡ್ಯ ನ.14 : ನಾಗಮಂಗಲ ತಾಲೂಕಿನ ಚುಂಚನಗಿರಿಯಲ್ಲಿ ಯಾವುದೇ ಡ್ಯಾನ್ಸಿಂಗ್ ಶೋ..ನಾ ಅಥವಾ ಸಿಂಗಿಂಗ್ ಶೋ ನಾ ಆಡಿಷನ್ ನಡೀತಾ ಇರ್ಲಿಲ್ಲ. ಆದರೆ ಅಲ್ಲಿ 10 ಸಾವಿರದಷ್ಟು ಯುವಕರು ನಾ ಮುಂದು ತಾ ಮುಂದು ಎಂಬಂತೆ ನೆರೆದಿರುವ ದೃಶ್ಯ ಕಂಡು ಬಂದಿತ್ತು.

ಹಾಗಾದರೆ ಅಲ್ಲಿ ನಡೀತಾ ಇದ್ದಿದಾದರೂ ಏನೂ ಅಂತೀರಾ….? ಅಲ್ಲಿ ನಡೀತಾ ಇದ್ದೀದು ವರಾನ್ವೇಷಣೆ….. ಹೌದು ಸಮಾಜ ಸಂಪರ್ಕ ವೇದಿಕೆ, ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ವತಿಯಿಂದ ಮಂಡ್ಯದ ಚುಂಚನ ಗಿರಿಯಲ್ಲಿ ಒಕ್ಕಲಿಗ ಸಮುದಾಯದ ವಧು-ವರರ ಅನ್ವೇಷಣಾ ಸಮಾವೇಶ ಆಯೋಜಿಸಲಾಗಿತ್ತು.

ಅಚ್ಚರಿ ಅಂದರೆ ರಾಜ್ಯ ಮಟ್ಟದ ಈ ಸಮಾವೇಶಕ್ಕೆ 200 ಒಕ್ಕಲಿಗ ಹುಡುಗಿಯರು ಬಂದಿದ್ದು, 10 ಸಾವಿರಕ್ಕೂ ಹೆಚ್ಚು ಹುಡುಗರು ಸಂಗಾತಿ ಅರಸಿ ಬಂದಿದ್ದರು. ಅಚ್ಚರಿ ಅಂದರೆ ರಾಜ್ಯ ಮಟ್ಟದ ಈ ಸಮಾವೇಶಕ್ಕೆ 200 ಒಕ್ಕಲಿಗ ಹುಡುಗಿಯರು ಬಂದಿದ್ದು, 10 ಸಾವಿರಕ್ಕೂ ಹೆಚ್ಚು ಹುಡುಗರು ಸಂಗಾತಿ ಅರಸಿ ಬಂದಿದ್ದರು. ಸಮಾವೇಶ ನಡೆಯುವ ಸ್ಥಳದಲ್ಲಿ ಸಾವಿರಾರು ಸಂಖ್ಯೆಯ ಯುವಕರ ಜೊತೆಗೆ ಅವರ ಪೋಷಕರೂ ಸೇರಿ ಕಿಕ್ಕಿರಿದ ಜನಸ್ತೋಮ ಕಂಡು ಬಂದಿತ್ತು. ಇನ್ನು ಸಮಾವೇಶಕ್ಕಾಗಿ ಯುವಕರು ಹಾಕಿದ ಅರ್ಜಿ ನೋಡಿ ಸಮಾವೇಶದ ಆಯೋಜಕರೇ ಶಾಕ್ ಆಗಿದ್ದರಂತೆ. ಅಂತೂ ಇಲ್ಲಿ ನಡೆದ ಕಾರ್ಯಕ್ರಮ ವಧುವಿಗೆ(ಹುಡಿಗಿಯರಿಗೆ) ಡಿಮ್ಯಾಂಡೋ ಡಿಮ್ಯಾಂಡ್ ಎನ್ನುವಂತಿತ್ತು.

ಅಲ್ಲದೆ ಈ ಸಮಾವೇಶದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು ಇವರ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ರಸ್ತೆಯಲ್ಲಿ ವಾಹನ ಸವಾರರು ಟ್ರಾಫಿಕ್ ಜಾಮ್ ಸಮಸ್ಯೆ ಎದುರಿಸಬೇಕಾಯಿತು. ಅನೇಕ ವಾಹನ ಸವಾರರು ರಸ್ತೆಯಲ್ಲಿ ಉದ್ದೂದ್ದ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿರುವ ದೃಶ್ಯ ಕಂಡು ಬಂದಿತ್ತು.

Leave a Reply

Your email address will not be published.

error: Content is protected !!