ಕಾಪು: ಸ್ಕೂಟಿ-ಕಾರು ಅಪಘಾತ: ಸವಾರ ಗಂಭೀರ

ಕಾಪು ನ.14( ಉಡುಪಿ ಟೈಮ್ಸ್ ವರದಿ) : ಸ್ಕೂಟಿ ಮತ್ತು ಕಾರು ನಡುವೆ ನಡೆದ ರಸ್ತೆ ಅಪಘಾತದಲ್ಲಿ ಸವಾರ ಗಂಭೀರ ಗಾಯಗೊಂಡ ಘಟನೆ ಕೊಪ್ಪಲಂಗಡಿ ಕಮ್ಯುನಿಟಿ ಹಾಲ್ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಕಾಪು ಕೋತಲಕಟ್ಟೆ ನಿವಾಸಿ ಫಾರೂಖ್ (65) ಗಂಭೀರ ಗಾಯಗೊಂಡವರು. 

ರಾಷ್ಟ್ರೀಯ ಹೆದ್ದಾರಿ 66 ರ ಕೊಪ್ಪಲಂಗಡಿ ಮಸೀದಿಗೆ ತೆರಳಿ, ವಾಪಸ್ಸಾಗುತ್ತಿದ್ದಾಗ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದೆ.  ಅಪಘಾತದಲ್ಲಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿದ್ದು, ಅವರನ್ನು  ಉಡುಪಿ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!