ಬಾದಾಮಿ ದೂರ ದೂರ… ಕೋಲಾರ ಹತ್ತಿರ ಹತ್ತಿರ…

ಕೋಲಾರ ನ.14 : ನನಗೆ ಯಾವುದೇ ಕ್ಷೇತ್ರದಿಂದ ನಿಲ್ಲಲು ಅಂಜಿಕೆ ಇಲ್ಲ. ಬಾದಾಮಿಯವರು ಇಲ್ಲೇ ನಿಲ್ಲಬೇಕು ಎಂದು ಹೇಳುತ್ತಾರೆ. ಆದರೆ ಬಾದಾಮಿ ನನಗೆ ಸ್ವಲ್ಪ ದೂರ ಇರುವುದರಿಂದ ಸಮಸ್ಯೆ. ಕೋಲಾರ ಬೆಂಗಳೂರಿಗೆ ಹತ್ತಿರ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕೋಲಾರದ ಚೌಡೇನಹಳ್ಳಿಯಲ್ಲಿ ಇಂದು ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಾದಾಮಿಯಲ್ಲಿ ಚುನಾವಣೆಗೆ ನಿಲ್ಲುವುದು ರೂಲ್ಡ್ ಔಟ್. ಹೈಕಮಾಂಡ್ ವರುಣಾ, ಕೋಲಾರ ಎಲ್ಲಿ ನಿಲ್ಲಿ ಎಂದು ಹೇಳುತ್ತದೋ ಅಲ್ಲಿ ನಿಲ್ಲುತ್ತೇನೆ. ಹೈಕಮಾಂಡ್ ಕೋಲಾರದಿಂದ ನಿಲ್ಲಿ ಅಂದರೆ ಇಲ್ಲೇ ನಾಮಪತ್ರ ಸಲ್ಲಿಸಬೇಕು ಅಲ್ವಾ?” ಎಂದರು.

ಹಾಗೂ ಇಲ್ಲಿನ ಮುಖಂಡರುಗಳು ಒಂದು ದಿನ ನೀವು ಕೋಲಾರಕ್ಕೆ ಬರಬೇಕು ಅಂತ ಸೂಚಿಸಿದ್ದರು. ಎಲ್ಲರ ಒತ್ತಾಸೆ ಇರುವುದರಿಂದ ಕೋಲಾರದಿಂದ ಸ್ಪರ್ಧಿಸಲ್ಲ ಅಂತ ಹೇಳಕ್ಕಾಗಲ್ಲ’ ಎಂದು ಇದೇ ವೇಳೆ ಅವರು ತಿಳಿಸಿದರು.

Leave a Reply

Your email address will not be published.

error: Content is protected !!