ಆನ್ಲೈನ್ ಕಂಪೆನಿಗಳ ಆಫರ್ ಎಂಬ ವಂಚನೆ: ಮೊಬೈಲ್ ರೀಟೇಲರ್ ಅಸೋಸಿಯೇಶನ್

ಉಡುಪಿ ನ.12 (ಉಡುಪಿ ಟೈಮ್ಸ್ ವರದಿ): ಆನ್ ಲೈನ್ ಕಂಪೆನಿಗಳಿಗಿಂತ ಸ್ಥಳೀಯ ಅಂಗಡಿಗಳಲ್ಲಿ ಉತ್ತಮ ಆಫರ್ ಗಳು ಹಾಗೂ ಕಡಿಮೆ ಬೆಲೆಯಲ್ಲಿ, ಮೊಬೈಲ್ ಗಳು ಲಭ್ಯವಿದೆ. ಆದರೆ ಆನ್ಲೈನ್ ಕಂಪೆನಿಗಳು ಜನರನ್ನು ಆಕರ್ಷಿಸುವ ಸಲುವಾಗಿ ನೀಡುತ್ತಿರುವ ಯೋಜನೆಗಳು ಜನರಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ನಷ್ಟಗಳನ್ನು ಉಂಟು ಮಾಡುವಂತಹದ್ದಾಗಿದ್ದು ಇದರಿಂದ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಮೊಬೈಲ್ ರೀಟೇಲರ್ ಅಸೋಸಿಯೇಶನ್ ಅಧ್ಯಕ್ಷ ಶೈಲೇಂದ್ರ ಸರಳಾಯ ಅವರು ಹೇಳಿದ್ದಾರೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಹಬ್ಬಗಳು ಸಮೀಪಿಸುತ್ತಿರುವಾಗ ವಿದೇಶಿ ಆನ್‍ಲೈನ್ ಕಂಪೆನಿಗಳಾದಂತಹ ಫ್ಲಿಪ್ ಕಾರ್ಟ್ ಮತ್ತು ಆಮೆಜಾನ್’ಗಳು ಬಿಗ್ ಬಿಲಿಯನ್ ಡೇಯ್ಸ್ ಎನ್ನುವಂತಹ ಆಫರ್‍ ಗಳನ್ನೆಲ್ಲ ಬಿಟ್ಟು ಜನರಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ನಷ್ಟಗಳನ್ನು ಉಂಟು ಮಾಡುವಂತಹ ಯೋಜನೆಗಳನ್ನು ಪ್ರತಿಭಾರಿಯಂತೆ ಈ ಭಾರಿಯೂ ನೀಡಿದೆ. ಆದರೆ ಈ ಯೋಜನೆಯಿಂದ ಜನರಿಗೆ ಯಾವುದೇ ರೀತಿ ಉತ್ತಮವಾದಂತಹ ಆಫರ್‍ಗಳು ನೀಡುತ್ತಿಲ್ಲ. ಕೇವಲ ಮಾರ್ಕೆಟಿಂಗ್ ಆಡ್ ಕಾನ್ಸೆಪ್ಟ್‍ನಲ್ಲಿ ಜಾಹೀರಾತುಗಳನ್ನು ಮಾತ್ರ ಹಾಕುತ್ತಾರೆ ಬಿಟ್ಟರೆ ಅದರಲ್ಲಿ ಯಾವುದೆ ರೀತಿಯ ವಿಶೇಷ ಆಫರ್‍ನ್ನು ಆನ್ ಲೈನ್ ಕಂಪೆನಿಗಳು ನೀಡುತ್ತಿಲ್ಲ ಎಂದು ಆರೋಪಿಸಿದರು.

ಹಾಗೂ ಜನರು ಈ ಆನ್ಲೈನ್ ಕಂಪೆನಿಗಳ ಜಾಹಿರಾತುಗಳನ್ನು ನಂಬಿ ಆಫರ್ ಇದೆ ಎಂದು ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ ಹಾಗೆ ದೊಡ್ಡ ಮಟ್ಟದಲ್ಲಿ ಮೋಸ ಹೊಂದಿದ್ದಾರೆ. ಅದೇ ರೀತಿಯಲ್ಲಿ ಸ್ಥಳೀಯ ವ್ಯಾಪಾರಿಗಳಿಗೂ ಕೂಡ ಇದರಿಂದ ನಷ್ಟ ಉಂಟಾಗಿದೆ. ಕೆಲವೊಂದು ಚಿಕ್ಕಪುಟ್ಟ ವ್ಯಾಪಾರದವರು ಇಂತಹ ದೊಡ್ಡ ಮಾರ್ಕೆಟಿಂಗ್ ಆಫರ್‍ನಿಂದಾಗಿ ತುಂಬಾ ನಷ್ಟ ಹೊಂದಿದ್ದಾರೆ. ಇದರಿಂದ ಜನರಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೂ ಕೂಡ ಮೋಸ ಆಗಿದೆ ಎಂದು ಹೇಳಿದ್ದಾರೆ.

ಸರಕಾರ ಮಾಡಿರುವ ಕಾನೂನುಗಳನ್ನು ಲೆಕ್ಕಿಸದೆ ಅದನ್ನೆಲ್ಲಾ ಉಲ್ಲಂಘಿಸಿ ಆನ್‍ಲೈನ್ ಇಂತಹ ಮಾರ್ಕೆಟಿಂಗ್ ಆಡ್ ಕಾನ್ಸೆಪ್ಟ್‍ನಲ್ಲಿ ಜಾಹೀರಾತುಗಳನ್ನು ಹಾಕುತ್ತಿದೆ. ಇದರಿಂದ ಜನರಿಗೆ ಯಾವುದೇ ರೀತಿಯ ಉಪಯೋಗಗಳಿಲ್ಲ. ಜನರು ಇದನ್ನು ಗಮನಿಸಿಕೊಂಡು ಇನ್ನು ಮುಂದಿನ ದಿನಗಳಲ್ಲಿ ಸ್ಥಳೀಯ ವ್ಯಾಪಾರಿಗಳ ಬಳಿಯೇ ತಮ್ಮ ಖರೀದಿಯನ್ನು ಮಾಡಬೇಕು ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮೊಬೈಲ್ ರೀಟೇಲರ್ ಆಸೋಸಿಯೇಶನ್ ಹಾಗೂ ಆಲ್‍ಓವರ್ ಇಂಡಿಯಾ ಮೊಬೈಲ್ ರೀಟೇಲರ್ ಅಸೋಸಿಯೇಶನ್ ಲಕ್ಕಿ ಡ್ರಾ ದೀಪಾವಳಿ ಫೆಸ್ಟಿವಲ್ ಆಫರ್ ನ್ನು ಆಯೋಜಿಸಿದೆ. ಜನರು ಅದನ್ನು ನೈಜವಾಗಿ ನೋಡಬಹುದು ಯಾಕೆಂದರೆ ಪ್ರತಿಯೊಂದು ಡ್ರಾ ಕೂಡಾ ನಾವು ಮಾಧ್ಯಮದವರನ್ನು ಕರೆದು ಪ್ರೆಸ್ ಮೀಟ್ ಮೂಲಕ ಜನರಿಗೆ ಬಹಿರಂಗವಾಗಿ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ನಡೆಸುತ್ತೇವೆ ಎಂದು ತಿಳಿಸಿದರು.

ಇನ್ನು ಆಯೋಜಿಸಿದಂತಹ ಆಫರ್ ನ ಎರಡನೇ ವಾರದ ಲಕ್ಕಿ ಡ್ರಾವನ್ನು ಉಡುಪಿಯಲ್ಲಿ ಮಾಡಲಾಗುತ್ತಿದೆ. ಪ್ರತೀ ಮೊಬೈಲ್ ಖರೀದಿಗೆ ಖಚಿತ ಬಹುಮಾನದ ರೂಪದಲ್ಲಿ 20 ಸಾವಿರಕ್ಕೂ ಅಧಿಕ ಉಡುಗೊರೆಗಳು ಹಾಗೂ ಈ ಡ್ರಾದಲ್ಲಿ ಪ್ರತೀ ತಿಂಗಳು ಒಂದು ಸ್ಕೂಟರ್ ಮತ್ತು ಐದು ಟಿವಿಯನ್ನು ಡ್ರಾ ಮಾಡುವ ಮೂಲಕ ಗ್ರಾಹಕರಿಕಗೆ ಕೊಡಲಾಗುತ್ತದೆ. ಹೀಗೆ ಒಟ್ಟು 4 ಬೈಕ್ ಗಲು ಹಾಗೂ 20 ಎಲ್.ಇ.ಡಿ ಹಾಗೂ ಇತರ ಅನೇಕ ಬಹುಮಾನಗಳನ್ನು ಮೊಬೈಲ್ ರೀಟೇಲರ್ ಆಸೋಸಿಯೇಶನ್ ನೀಡುತ್ತಿದೆ ಮತ್ತು ಇದು ನೈಜವಾದ ಆಫರ್ ಆಗಿದೆ, ಇದಕ್ಕೆ ಸ್ಥಳೀಯ ಗ್ರಾಹಕರ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಅಧ್ಯಕ್ಷ ಶೈಲೇಂದ್ರ ಬಲ್ಲಾಳ್, ವಿವೇಕ್ ಜಿ. ಸುವರ್ಣ, ಸುಹಾಸ್ ಕಿಣಿ, ಗುರುದತ್ ಕಾಮತ್, ಸಂದೇಶ್ ಬಲ್ಲಾಳ್ ಇದ್ದರು.

Leave a Reply

Your email address will not be published.

error: Content is protected !!