ನ.12: ಕಡಿಯಾಳಿಯಲ್ಲಿ ಪುರುಷರ ಎಥ್ನಿಕ್ ವೇರ್ ಮಳಿಗೆ “ಸ್ವಯಂವರ” ಉದ್ಘಾಟನೆ

ಉಡುಪಿ ನ.11 (ಉಡುಪಿ ಟೈಮ್ಸ್ ವರದಿ) : ಕಡಿಯಾಳಿಯಲ್ಲಿರುವ ಹಿಮಾಲಯಾ ಪರ್ಲ್‍ನ ಕಟ್ಟಡದ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಪುರುಷರ ಸಾಂಪ್ರದಾಯಿಕ ಉಡುಗೆಯ ಮಳಿಗೆ “ಸ್ವಯಂವರ’ ಇದರ ಉದ್ಘಾಟನಾ ಸಮಾರಂಭ ನ.12 ರಂದು ಸಂಜೆ 4:30 ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಮಾಲಕ ಗುರುಕೃಷ್ಣ ಹೆಗ್ಡೆ ಅವರು ತಿಳಿಸಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ನೂತನ ಮಳಿಗೆಯನ್ನು ಸೋದೆ ಮಠದ ಸ್ವಾಮಿಜಿ ವಿಶ್ವವಲ್ಲಭ ತೀರ್ಥ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಈ ವೇಳೆ ಶಾಸಕ ರಘುಪತಿ ಭಟ್, ಸಗ್ರಿ ಗೋಪಾಲ ಕೃಷ್ಣ ಸಾಮಗ, ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ ಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ವೇಗವಾಗಿ ಬೆಳೆಯುತ್ತಿರುವ ಪುರುಷರ ವೇರ್ ಬ್ಯ್ರಾಂಡ್‍ನಲ್ಲಿ ಸ್ವಯಂವರ ಕೂಡಾ ಒಂದಾಗಿದೆ. ಉಡುಪಿಯಲ್ಲಿ ಸ್ವಯಂವರ ಮಳಿಗೆಯು ದೇಶದ 63 ನೇ ಮಳಿಗೆಯಾಗಿದ್ದು, ಕರ್ನಾಟಕದಲ್ಲಿ 7 ನೇ ಮಳಿಗೆಯಾಗಿದೆ.
2015 ರಿಂದ ಸ್ವಯಂವರ ಬ್ರ್ಯಾಂಡ್ ಆರಂಭಗೊಂಡಿದ್ದು, 1945 ರಿಂದ ತೆಲಂಗಾಣ- ವಾರಂಗಲ್‍ನಿಂದ ಕಸಮ್ ಗುಂಪಿನ ಭಾಗವಾಗಿದೆ ಮತ್ತು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಸಂಸ್ಥೆಯ ಅಧ್ಯಕ್ಷ ಶಿವ ಪ್ರಸಾದ್ ಕಾಸಂ ಮತ್ತು ಎಂ.ಡಿ ಸಂಜಯ್ ಬೋಹ್ರಾ ಅವರು ಮೊದಲ ಮಳಿಗೆಯನ್ನು ಹನುಮಕೊಂಡದಲ್ಲಿ ಪ್ರಾರಂಭಿಸಿದರು. ಪ್ರಸ್ತುತ ಭಾರತದಲ್ಲಿ 12 ರಾಜ್ಯಗಳಲ್ಲಿ ಈ ಸಂಸ್ಥೆಯ ಶಾಖೆಗಳು ಇದ್ದು, ಶೀಘ್ರದಲ್ಲೇ 75 ಅಂಗಡಿಗಳ ಬೆಂಚ್ ಮಾರ್ಕ್ ಅನ್ನು ತಲುಪುತ್ತೇವೆ. ಹಾಗೂ ಈ ಆರ್ಥಿಕ ವರ್ಷದಲ್ಲಿ 100 ಮಳಿಗೆಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಇಲ್ಲಿ ಸೆಮಿ ಇಂಡೋವೆಸ್ಟರ್ನ್, ಮೋದಿ ಕೋಟ್, ಜೋಧಪುರಿ, ಬ್ಲೇಜರ್, ಇಂಡೋವೆಸ್ಟರ್ನ್, ಶೇರ್ವಾನಿ, ಕುರ್ತಾ ಪೈಜಾಮಾ, ಡಿಸೈನರ್ ಕುರ್ತಾ, ಲೆನೆನ್ ಕುರ್ತಾ, ಹ್ಯಾಂಡ್ಲೂಮ್ಸ್, ಪ್ರಿನ್ಸ್ ಇಂಡೋ ಮೊದಲಾದ ವೈವಿದ್ಯಮಯ ಉಡುಪುಗಳ ಅಪಾರ ಸಂಗ್ರಹ ಇಲ್ಲಿ ಕಾಣಬಹುದಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಲಕ ಗುರು ಕೃಷ್ಣ ಹೆಗ್ಡೆ ಅವರ ಪತ್ನಿ ಲಕ್ಷ್ಮೀ ಹೆಗ್ಡೆ, ಸೇಲ್ಸ್ ಹೆಡ್ ಅರವಿಂದ್, ಸುಮಿತ್ ಪಾಶ್, ಶಾಹಿಲ್ ರೈ ಉಪಸ್ಥಿತರಿದ್ದರು.