ಇನ್ಮುಂದೆ ಅಂಧರೂ ಓದಬಹುದು ಸಂವಿಧಾನ

ಮುಂಬೈ: ಸಂವಿಧಾನದ ಮಹತ್ವಗಳನ್ನು ಅರಿಯುವಲ್ಲಿ ಅಂಧರು ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಸಂವಿಧಾನ ಪುಸ್ತಕದ ಪ್ರತಿಯನ್ನು ಬ್ರೆಲ್  ಲಿಪಿಯಲ್ಲಿ ಮುದ್ರಣಮಾಡಿ ಬಿಡುಗಡೆ ಮಾಡಲಾಗಿದೆ.

ಅಂಧರಿಗೂ ಕೂಡಾ ಸಂವಿಧಾನವನ್ನು ಓದುವ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಈ ಕಾರ್ಯ ಕೈಗೊಂಡಿದ್ದು, ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ಬ್ರೈಲ್ ಲಿಪಿಯಲ್ಲಿ ರಚಿತವಾದ ಭಾರತೀಯ ಸಂವಿಧಾನದ ಪ್ರತಿಯನ್ನು ಬಿಡುಗಡೆಗೊಳಿಸಿದ್ದಾರೆ. 

ಥಾಣೆ ಮೂಲದ ಅಸ್ತಿತ್ವ ಎಂಬ ಎನ್‌ಜಿಒ ಸಂಸ್ಥೆಯೊಂದು ಸಂವಿಧಾನದ ಪ್ರತಿಯನ್ನು ತಯಾರಿಸಿದೆ. ಇಂದು ಅಂಧರ ಸ್ನೇಹಿಯಾಗಿರುವ ಅನೇಕ ಪುಸ್ತಕಗಳು ಬ್ರೈಲ್ ಲಿಪಿಯಲ್ಲಿ ಮುದ್ರಣಗೊಂಡಿರುವಾಗ ನಿತ್ಯ ಜೀವನಕ್ಕೆ ಆಧಾರವಾಗಿರುವ ಭಾರತೀಯ ಸಂವಿಧಾನದಲ್ಲಿ ಇರುವ ಅಂಶಗಳಿಂದ ಅಂಧರು ವಂಚಿತರಾಗಬಾರದು ಎಂಬ ಉದ್ದೇಶದಿಂದ, ಸಂವಿಧಾನದ ಪ್ರತಿಯನ್ನು ಬ್ರೈಲ್ ಲಿಪಿಯಲ್ಲಿ ಹೊರತಂದಿರುವುದಾಗಿ ಸಂಸ್ಥೆ ಹೇಳಿದೆ.

ಅಂಧರು ಸಂವಿಧಾನದ ಅಂಶಗಳ ಕುರಿತು ಅವರಿವರ ಬಳಿ ಕೇಳಿ ತಿಳಿದು ಕೊಳ್ಳುವುದಕ್ಕಿಂತಲೂ ಅವರೇ ಖುದ್ದಾಗಿ ಅದನ್ನು ಅರ್ಥೈಸಿಕೊಂಡು, ಅರಿತರೆ ಅದರ ಆಳವಾದ ವಿಚಾರಧಾರೆಗಳನ್ನು ತಿಳಿದುಕೊಳ್ಳಲು ಸಾಧ್ಯ ಎನ್ನುವ ಕಾರಣಕ್ಕೆ ಸಂಸ್ಥೆ ಇಂಥದ್ದೊಂದು ದಿಟ್ಟ ಹೆಜ್ಜೆ ಇಟ್ಟಿದ

Leave a Reply

Your email address will not be published. Required fields are marked *

error: Content is protected !!