ಉಡುಪಿ : ಹೀರೋ ಶಕ್ತಿ ಮೋಟಾರ್ಸ್ ನ ಕರಾವಳಿಯ ಮೊದಲ ಶಾಖೆ ಉದ್ಘಾಟನೆ

ಉಡುಪಿ ನ.10 : ದೇಶದ ಪ್ರಸಿದ್ಧ ಹೀರೋ ಶಕ್ತಿ ಮೋಟಾರ್ಸ್ ನ ಭಾರತದ 5ನೇ ಮತ್ತು ಕರಾವಳಿಯ ಮೊದಲ ಅಧಿಕೃತ ಶೋರೂಂ ಕರಾವಳಿ ಜಂಕ್ಷನ್ ಬಳಿಯ ಶ್ರೀ ರಾಮದರ್ಶನ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.

ನೂತನ ಶೋರೂಂನ್ನು ಶಾಸಕ ರಘುಪತಿ ಭಟ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉಡುಪಿ ಬೆಳೆಯುತ್ತಿರುವ ನಗರ. ಇಂತಹ ಬೆಳೆಯುತ್ತಿರುವ ನಗರದ ಹೃದಯ ಭಾಗದಲ್ಲಿ ಹೀರೋ ಸಂಸ್ಥೆಯವರು ತಮ್ಮವಿಶೇಷ ಶೋರೂಂ ಅನ್ನು ಸ್ಥಾಪಿಸಿರುವುದು ನಗರಕ್ಕೆ ಇನ್ನೂ ಹೆಚ್ಚಿನ ಶೋಭೆ ತಂದಿದೆ. ಉಡುಪಿ ಜನತೆಯ ಮೇಲೆ ವಿಶ್ವಾಸವಿರಿಸಿದ್ದಕ್ಕೆ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಹಾಗೂ ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಹೆಚ್ಚು ಹೆಚ್ಚು ಬೆಳವಣಿಗೆಯನ್ನು ಹೊಂದಲಿ ಎಂದು ಶುಭಹಾರೈಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್ ಟಿ.ಕರ್ನೆ ಅವರು ಮಾತನಾಡಿ, ಹೀರೋ ಕಂಪೆನಿಯು ತಮ್ಮ ಮೇಲೆ ನಂಬಿಕೆ ಇಟ್ಟು ತಮಗೆ ಇಷ್ಟು ದೊಡ್ಡ ಅವಕಾಶ ಮತ್ತು ಜವಾಬ್ದಾರಿ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಹಾಗೂ ಕಂಪನಿಯ ಆಶಯಗಳಿಗೆ ತಕ್ಕಂತೆ ಸಂಸ್ಥೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಸುವ ಸದಾಶಯವಿದೆ ಮತ್ತು ಕಂಪನಿ ತಮ್ಮ ಮೇಲೆ ಇಟ್ಟಿರುವ ಭರವಸೆಗೆ ಬದ್ಧರಾಗಿ ಕೆಲಸ ಮಾಡುತ್ತೇವೆ. ಡಿಜಿಟಲ್ ಭಾರತದ 2.0 ಶೋರೂಂ ಇದಾಗಿದ್ದು, ಸಂಪೂರ್ಣವಾಗಿ ಡಿಜಿಟಲೀಕೃತವಾಗಿದೆ. ವಾಹನಗಳ ಭೌತಿಕ ಮತ್ತು ಡಿಜಿಟಲ್ ಪ್ರದರ್ಶನವಿದ್ದು, ಗ್ರಾಹಕರು ತ್ರೀಡಿ ವೀಕ್ಷಣೆಯಲ್ಲಿ ವಾಹನಗಳ ಮಾದರಿ, ಬಣ್ಣ ಮುಂತಾದವುಗಳನ್ನು ಪರಿಶೀಲಿಸಬಹುದು. ಉಡುಪಿಯ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದು ನಮ್ಮ ಬದ್ಧತೆಯಾಗಿದ್ದು ಇದರಲ್ಲಿ ಯಶಸ್ವಿಯಾಗುವ ಭರವಸೆ ಇದೆ ಎಂದರು. ಇದರ ಜೊತೆಗೆ ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಸಾಧಿಸಿದ್ದು, ಪ್ರಸಕ್ತ ವರ್ಷದಲ್ಲಿ ಶಕ್ತಿ ಆಟೋ ಮಾರ್ಟ್, ಶಕ್ತಿ ಟೈರ್ಸ್ ಅನ್ನು ಬಿಡುಗಡೆಮಾಡಿದ ಬಳಿಕ ಮೂರನೆಯದಾಗಿ ಉಡುಪಿಯಲ್ಲಿ ಶಕ್ತಿ ಮೋಟರ್ಸ್ ಅನ್ನು ಬಿಡುಗಡೆಗೊಳಿಸಿದ್ದೇವೆ. ಸಂಸ್ಥೆಯ ಶೋರೂಂಗಾಗಿ ಸ್ಥಳಾವಕಾಶ ನೀಡಿದ ಜಾಗದ ಮಾಲಕ ಬನ್ನಂಜೆ ವಿಜಯ್ ಕುಮಾರ್ ಅವರನ್ನು ಅಭಿನಂದಿಸುತ್ತೇನೆ ಎಂದರು.

ಇದೇ ವೇಳೆ, ಹೀರೋ ಏರಿಯಾ ಸರ್ವಿಸ್ ಮ್ಯಾನೇಜರ್ ಎನ್.ರಮಣಿ ಅವರು ಮಾತನಾಡಿ, ಹೀರೋ ಕಂಪನಿಯು 45 ಡೀಲರ್ ಶಿಪ್ ಗಳನ್ನು ಹೊಂದಿದ್ದು, ಭಾರತದಲ್ಲೇ ನಂ.1 ಡೀಲರ್ ಗಳಾಗಿದ್ದಾರೆ. ಸಂಸ್ಥೆಯಲ್ಲಿ ಕೌಶಲ್ಯಾಧಾರಿತ ಮಾನವ ಸಂಪನ್ಮೂಲ ಮತ್ತು ತಜ್ಞರಿದ್ದು, ಗ್ರಾಹಕರಿಗೆ ಎಲ್ಲಾ ರೀತಿಯ ಸೇವೆಯನ್ನು ನೀಡಲಾಗುವುದು ಎಂದರು. ಹಾಗೂ ಸಂಸ್ಥೆಯ ಪವನ್ ಮುಂಜಾಲ್ ಅವರು ನೀಡಿದ ಉದ್ಘಾಟನಾ ಫಲಕವನ್ನು ವಿಜಯ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ದ್ವಿಚಕ್ರ ವಾಹನದ ಮೊದಲ ಗ್ರಾಹಕರಿಗೆ ವಾಹನಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ತುಕರಾಮ್ ವೈ ಕರ್ನೆ, ಮಂಜುಳಾ ಟಿ. ಕರ್ನೆ, ಹರ್ಷ ಟಿ ಕರ್ನೆ, ಬಿಸ್‍ನೆಸ್ ಡೆವಲಪ್ಟೆಂಟ್ ದೇವೆಂದ್ರ ಸಿಂಗ್, ರಾಜಾ ಸಂಪತ್, ಸ್ಥಳದ ಮಾಲಕ ಬನ್ನಂಜೆ ವಿಜಯ್ ಕುಮಾರ್, ದಕ್ಷಿಣ ವಲಯ ಮುಖ್ಯಸ್ಥ ರಾಮು ರಾವ್, ವಲಯ ಮಾರಾಟ ಮುಖ್ಯಸ್ಥ ಪ್ರದೀಪ್ ನೈರ್, ವಲಯ ಸೇವಾ ಮುಖ್ಯಸ್ಥ ಶಾಜಿ ಟಿ.ಪಿ, ಲೀಡ್ ಚಾನಲ್ ಡೆವೆಲಪೆಂಟ್ ಹಿತೇಶ್ ಗೇರಾ, ವಲಯ ಬಿಡಿಭಾಗ ಮುಖ್ಯಸ್ಥ ಸುಧಾಕರ್ ಜಾಧವ್, ಏರಿಯಾ ಮ್ಯಾನೇಜರ್ ಕೆ.ಆರ್ ಸುಬ್ರಮಣ್ಯನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.

error: Content is protected !!