ಕಾಂಗ್ರೆಸ್ಸಿಗರೇ ಅಶ್ಲೀಲರು : ಉಡುಪಿ ಜಿಲ್ಲಾ ಬಿಜೆಪಿ

ಉಡುಪಿ ನ.9(ಉಡುಪಿ ಟೈಮ್ಸ್ ವರದಿ) : ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಸತೀಸ್ ಜಾರಕಿಹೊಳಿ ಅವರ ಹಿಂದೂ ಅಶ್ಲೀಲ ಪದ ಎಂಬ ಹೆಳಿಕೆಯನ್ನು ಖಂಡಿಸಿ ಇಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಗರ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಮಾತನಾಡಿ, ಹಿಂದು ಅಶ್ಲೀಲವಲ್ಲ ಕಾಂಗ್ರೆಸ್ ನವರೇ ಅಶ್ಲೀಲರು. ಅಶ್ಲೀಲ ಹಿಂದೂ ಎನ್ನುವ ಪದ ಕಾಂಗ್ರೆಸ್ ನವರಿಗೆ ಅನ್ವಯ ಆಗುತ್ತದೆ ಬಿಟ್ಟರೆ ಬೇರೆ ಯಾರಿಗೂ ಅನ್ವಯ ಆಗುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಎಲ್ಲೆಲ್ಲಿ ಹಿಂದೂಗಳ ಬಗ್ಗೆ ಅವಹೇಳನ ಮಾಡಲು ಆಗುತ್ತದೋ. ಎಲ್ಲೆಲ್ಲಿ ಹಿಂದೂಗಳ ಭಾವನೆಗಳ ಜೊತೆಗೆ ಆಟ ಆಡಲು ಆಗುತ್ತದೋ ಅದೆಲ್ಲವನ್ನೂ ಕಾಂಗ್ರೆಸ್ ಮಾಡುತ್ತಿದೆ. ಅದು ರಾಮ ಮಂದಿರ ವಿಷಯ ಇರಬಹುದು, ರಾಮ ಸೇತು ಬಗ್ಗೆ ಇರಬಹುದು ಅಥವಾ ಕಾಶ್ಮೀರದ ಬಗ್ಗೆಯೇ ಇರಬಹುದು. ಹಿಂದು ಅಶ್ಲೀಲ ಪದ ಎಂಬ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವುದಿಲ್ಲ, ನಾನು ಅದಕ್ಕೆ ಬದ್ದನಾಗಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನ ಕುಟಿಲ ಮಾನಸಿಕತೆ ಸತೀಶ್ ಜಾರಕಿಹೊಳಿ ಅವರಿಂದ ಹೊರ ಬಂದಿದೆ ಎಂದು ಕಿಡಿಕಾರಿದ್ದಾರೆ.
ಅಶ್ಲೀಲ ಹಿಂದು ಎನ್ನುವ ಪದ ವಿಕಿಪೀಡಿಯಾದಲ್ಲಿ ಸಿಕ್ಕಿದ್ದು ಎಂದು ಸತೀಶ್ ಜಾರಕಿ ಹೋಳಿ ಅವರು ಹೇಳುತ್ತಾರೆ. ಆದರೆ ವಿಕಿಪೀಡಿಯಾದಲ್ಲಿ ನೋಡಿದರೆ ನೆಹರು, ಇಂದಿರಾ ಗಾಂಧಿ ಬಗ್ಗೆನೂ ಇದೆ ಬಹುಷಹ ಕಾಂಗ್ರೆಸ್ ಬಗ್ಗೆ ಹಾಗೂ ಕಾಂಗ್ರೆಸ್ ನ ನಾಯಕರ ಬಗ್ಗೆ ಹೇಳುತ್ತಾ ಹೋದರೆ ಜನರು ಕಾಂಗ್ರೆಸ್ ನವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತಾರೆ. ಅಂತಹ ಪರಿಸ್ಥಿತಿಯನ್ನು ಇಂದು ಕಾಂಗ್ರೆಸ್ ತಂದಿದೆ. ಇದೀಗ ಹಿಂದುಗಳಿಗೆ ಅವಮಾನ ಮಾಡುವ ಹೇಳಿಕೆ ನೀಡಿರುವ ಸತೀಶ್ ಜಾರಕಿ ಹೊಳಿ ವಿರುದ್ಧ ಉಡುಪಿ ಠಾಣೆಯಲ್ಲಿ ದೂರನ್ನು ದಾಖಲಿಸುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಶಾಸಕ ರಘುಪತಿ ಭಟ್ ಅವರು ಮಾತನಾಡಿ, ಸತೀಶ್ ಜಾರಕಿಹೊಳಿ ಅವರ ಹೇಳಿಕೆಯಿಂದ ಅವರ ಮನಸ್ಸು ಎಷ್ಟು ಅಶ್ಲೀಲವಾಗಿದೆ ಎಂಬುದನ್ನು ಗುರುತಿಸಬಹುದು. ಆದ್ದರಿಂದ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಅಥವಾ ಅವರಿಂದ ಹಿಂದೂ ಸಮಾಜದ ಬಳಿ ಕ್ಷಮೆ ಕೇಳಿಸಬೇಕು ಇಲ್ಲವಾದಲ್ಲಿ ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಮಾತು ಮುಂದುವರೆಸಿದ ಅವರು, ಸತೀತೀಶ್ ಜಾರಕಿ ಹೊಳಿ ಯಾರೊಬ್ಬ ವ್ಯಕ್ತಿಯಲ್ಲ. ಅವರು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು. ಇವರ ಹೇಳಿಕೆಗೆ ಕಾಂಗ್ರೆಸ್ ಇನ್ನು ತನ್ನ ನಿಲುವನ್ನು ಪ್ರಕಟಿಸಿಲ್ಲ. ಆದ್ದರಿಂದ ಕಾಂಗ್ರೆಸ್ ಹಿಂದೂ ಎನ್ನುವುದು ಅಶ್ಲೀಲವಾ..? ಇಲ್ಲವಾ..? ಎನ್ನುವುದನ್ನು ಪ್ರಕಟಿಸಬೆಕು. ಇಂದು ಬಾರತದಲ್ಲಿ ಹಿಂದೂ ಎಂಬ ಶಬ್ದದ ಮೇಲೆ ರೋಮಾಂಚನವಾಗುವಂತಹ ಲಕ್ಷಾಂತರ ಜನ ಕೋಟ್ಯಾಂತರ ಜನ ಭಾರತದಲ್ಲಿದ್ದಾರೆ. ಹಿಂದೂಗಳು ಒಟ್ಟಾಗಿದ್ದಾರೆ ಹಿಂದುತ್ವದ ವಿಷಯಕ್ಕೆ ಬಂದಾಗ ರಾಷ್ಟ್ರೀಯತೆಯ ವಿಚಾರಕ್ಕೆ ಬಂದಾಗ ನಾವೆಲ್ಲಾ ಒಂದು ಎಂಬ ನಿರ್ಧಾರ ಮಾಡುತ್ತೇವೆ ಎಂದರು. ಹಾಗೂ ಹಿಂದೂಗಳನ್ನು ಚುನಾವಣೆ ಸಂದರ್ಬದಲ್ಲಿ ಜಾತಿಯ ಮೇಲೆ ಹೊಡೆದು ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದ ಕಾಲ ಇತ್ತು. ಅಲ್ಪ ಸಂಖ್ಯಾತರನ್ನು ಒಟ್ಟಾಗಿ ತೆಗೆದುಕೊಂಡು ಚುನಾವಣೆಯಲ್ಲಿ ಅವರ ತಂತ್ರಗಾರಿಕೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದರು. ಆದರೀಗ ಕಾಂಗ್ರೆಸ್ ನವರ ಆ ಬೇಳೆ ಬೇಯುತ್ತಿಲ್ಲ. ಆದ್ದರಿಂದ ಅಸಹನೀಯ ಪರಿಸ್ಥಿತಿಯಲ್ಲಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸುತ್ತೇವೆ. ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದದಿಂದ ಸತೀಶ್ ಜಾರಕಿಹೊಳಿಯನ್ನು ವಜಾಗೊಳಿಸಬೇಕು ಇಲ್ಲ ಕ್ಷಮೆ ಕೇಳಿಸಬೇಕು ಇಲ್ಲವಾದಲ್ಲಿ ನಮ್ಮ ಪ್ರತಿಭಟನೆಯನ್ನು ತೀವ್ರವಾಗಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಅವರು, ಇತ್ತೀಚಿನ ಬೆಳವಣಿಗೆಗಳನ್ನು ಕಂಡಾಗ ಕಾಂಗ್ರೆಸ್ ನವರು ಸಂಪೂರ್ಣ ಹಿಂದೂ ವಿರೋಧಿಗಳು ಎನ್ನುವುದು ಸಾಬೀತಾಗುತ್ತಿದೆ. ದೇಶದ ಸಮಸ್ತ ಹಿಂದೂಗಳನ್ನು ಕಾಂಗ್ರೆಸ್ ಅವಮಾನ ಮಾಡಿದೆ. ಆದರೆ ಕಾಂಗ್ರೆಸ್ ಹೇಳುತ್ತದೆ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು. ಆದರೆ ಕಾಂಗ್ರೆಸ್ ನ ಕಾರ್ಯಾಧ್ಯಕ್ಷರಾದವರು ಹಿಂದೂ ವಿರೋಧಿ ಹೇಳಿಕೆ ನೀಡಿದರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಬೇಕು ಇಲ್ಲ ಆತ ಸಮಸ್ತ ಹಿಂದೂ ಸಜಮಾದ ಕ್ಷಮೆಯಾಚಿಸಬೇಕು. ಆದ್ದರಿಂದ ಸತೀಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ನಾಯಕರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ನಾವು ನಮ್ಮ ವಿಚಾರ, ಧ್ಯೇಯ, ಸಿದ್ಧಾಂತದ ಬಗ್ಗೆ ರಾಜಿ ಮಾಡುವುದಿಲ್ಲ. ನಾವು ಹಿಂಧುತ್ವವನ್ನು ಪ್ರತಿಪಾದಿಸುತ್ತೇವೆ. ನಾವು ಒಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ಅವರಿಗೆ ಹಿಂದುಗಳಿಗೆ ಅವಮಾನ ಮಾಡಿದರೆ, ಹಿಂದು ಸಂಸ್ಕøತಿ ಬಗ್ಗೆ ಏನು ಮಾತನಾಡಿದರೂ ನಡೆಯುತ್ತದೆ ಎಂಬ ಭಾವನೆ ಇದೆ. ಕಾಲ ಬದಲಾಗಿದೆ ಇನ್ನು ನೀವು ಪೆಟ್ಟು ತಿಂದು ಬುದ್ದಿ ಕಲಿತಿಲ್ಲ ರಾಜೀವ ಗಾಂಧಿ ಅವರು ಇರುವಾಗ 400 ಕ್ಕೂ ಹೆಚ್ಚು ಲೋಕ ಸಭಾ ಸದಸ್ಯರನ್ನು ಹೊಂದಿದ್ದೀರಿ. ಪಾರ್ಲಿಂಟ್ ನಲ್ಲಿ ಇಂದು ನಿಮ್ಮ ಸಂಖ್ಯೆ ಎಷ್ಟಿದೆ. ಇದು ಹೀಗೆ ಆದರೆ 400 ಇದ್ದದ್ದು 40 ಆಗಿ ಮುಂದೆ 4 ಕ್ಕೆ ಮುಟ್ಟುತ್ತೀರ ಎಂದು ಎಚ್ಚರಿಕೆ ನೀಡಿದರು.
ಹಾಗೂ ಶ್ರೇಷ್ಠವಾದ ಹಿಂದೂ ಧರ್ಮದ ವಿರುದ್ಧ ಲಘುವಾಗಿ ಮಾತನಾಡುವಾಗ ಉಡುಪಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಎಲ್ಲಿದ್ದಾರೆ. ಒಂದು ವೇಳೆ ಮುಸ್ಲಿಂ ಸಮುದಾಯದ ಬಗ್ಗೆ ಒಂದು ಸಣ್ಣದು ಮಾತನಾಡಿದರೆ ಕಾಂಗ್ರೆಸ್ ನವರು ಮೈಮೇಲೆ ಬರುತ್ತಾರೆ. ಬಿಜೆಪಿ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಡಿಕೆ ಶಿವಕುಮಾರ್ ಅವರೇ ನೀವು ಇವತ್ತು ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದರೆ, ಮಲ್ಲಿಕಾರ್ಜುನ ಖರ್ಗೆ ಅವರೇ ನೀವು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೆ ಸತೀಶ್ ಜಾರಕಿಹೊಳಿಯನ್ನು ಅವರ ಸ್ಥಾನದಿಂದ ವಜಾ ಮಾಡಿ, ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಜನದು ನಿಮ್ಮನ್ನು ಗುದ್ದಾಡುತ್ತಾರೆ ಎಂದು ಖಡಕ್ ಆಗಿ ಕೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಸತೀಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ, ಬಿಜೆಪಿ ಮಹಿಳಾ ಮೋರ್ಚಾ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದರು.