ಕಾರ್ಕಳ: ಹಾಡಿಯಲ್ಲಿ ಮೆಸ್ಕಾಂ ಉದ್ಯೋಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾರ್ಕಳ ನ.9 (ಉಡುಪಿ ಟೈಮ್ಸ್ ವರದಿ): ತಾಲೂಕಿನ ಕಲ್ಯಾ ಗ್ರಾಮದಲ್ಲಿ ಹಾಡಿಯಲ್ಲಿ ನಿಟ್ಟೆಯ ಮಹಿಳಾ ಮೆಸ್ಕಾಂ ಉದ್ಯೋಗಿಯೊಬ್ಬರು ನೇಣು ಬಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕಲ್ಯಾ ಗ್ರಾಮದ ನಿಶಾ (23) ಆತ್ಮಹತ್ಯೆ ಮಾಡಿಕೊಂಡವರು.

ನಿಶಾ ಅವರು ನಿಟ್ಟೆಯ ಮೆಸ್ಕಾಂ ನಲ್ಲಿ ಉದ್ಯೋಗಿಯಾಗಿದ್ದರು. ಇವರ ಸಹೋದರ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಿಶಾರವರ ತಾಯಿ ಶಕುಂತಳಾರವರು ಮಾನಸಿಕವಾಗಿ ನೊಂದಿದ್ದರು. ಇದರಿಂದ ನಿಶಾ ಕೂಡ ಮಾನಸಿಕವಾಗಿ ನೊಂದು, ಇಲ್ಲವೇ ಬೇರೆ ಇನ್ನಾವುದೋ ಕಾರಣದಿಂದ ಮನನೊಂದು ನ.8 ರಂದು ಮಧ್ಯಾಹ್ನ ತನ್ನ ಮನೆಯ ಪಕ್ಕದ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಮೃತರ ತಂದೆ ರವಿ ಪೂಜಾರಿ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!