ಬಿಜೆಪಿಗೆ ಸೇರ್ಪಡೆಗೊಂಡ ಹಿಮಾಚಲ ಪ್ರದೇಶದ 26 ಕಾಂಗ್ರೆಸ್ ನಾಯಕರು
ಶಿಮ್ಲಾ ನ.9 : ಹಿಮಾಚಲ ಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ ಎನ್ನುವಾಗಲೇ ಇಲ್ಲಿನ ಕಾಂಗ್ರೆಸ್ ಪಕ್ಷದ 26 ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಧರಮ್ಪಾಲ್ ಠಾಕೂರ್, ಮಾಜಿ ಕಾರ್ಯದರ್ಶಿ ಆಕಾಶ್ ಸೈನಿ, ಮಾಜಿ ಕೌನ್ಸಿಲರ್ ರಾಜನ್ ಠಾಕೂರ್ ಹಾಗೂ ಇತರ ನಾಯಕರಾದ ಅಮಿತ್ ಮೆಹ್ತಾ, ಮೆಹರ್ ಸಿಂಗ್ ಕನ್ವರ್ ಮತ್ತು ರಾಹುಲ್ ನೇಗಿ ಅವರು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸೌದಾನ್ ಸಿಂಗ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಕಾಂಗ್ರೆಸ್ನ ‘ಶೋಷಕ ನೀತಿ’ಗಳಿಂದ ರೋಸಿ ಹೋಗಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ ಎಂಬುದಾಗಿ ಮಾಧ್ಯಮದಲ್ಲಿ ವರದಿಯಾಗಿದೆ.