ಮುರುಘಾ ಶ್ರೀ ಇಷ್ಟು ಕೆಳಮಟ್ಟಕ್ಕೆ ಇಳಿತಾರೆ ಎಂದು ಭಾವಿಸಿರಲಿಲ್ಲ: ಬಿಎಸ್ವೈ

ಉಡುಪಿ ನ.8(ಉಡುಪಿ ಟೈಮ್ಸ್ ವರದಿ): ಸತೀಶ್ ಜಾರಕಿಹೋಳಿ ಅವರು ಹಿಂದುಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಇದನ್ನು ಕಾಂಗ್ರೆಸ್ ನವರು ಖಂಡಿಸಿದರೆ ಸಾಲದು ಸತೀಶ್ ಜಾರಕಿಹೊಳಿ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ಹಿಂದೂ ಶಬ್ದದ ಅರ್ಥ ಅಶ್ಲೀಲವಾಗಿದೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸತೀಶ್ ಜಾರಕಿಹೋಳಿ ಅವರು ಹಿಂದುಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಇದನ್ನು ಕಾಂಗ್ರೆಸ್ ನವರು ಖಂಡಿಸಿದ್ದಾರೆ ಆದರೆ ಕಾಂಗ್ರೆಸ್ ಕೇವಲ ಖಂಡನೆ ಮಾಡಿದರೆ ಸಾಕಾಗೋದಿಲ್ಲ. ಸತೀಶ್ ಜಾರಕಿಹೊಳಿ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು. ಈ ರೀತಿ ಹಗುರವಾಗಿ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ ಅವರು. ಸತೀಶ್ ಜಾರಕಿಹೊಳಿ ಹಿಂದುಗಳಿಗೆ ಅಪಮಾನ ಆಗುವ ಹಾಗೆ ವರ್ತನೆ ಮಾಡಬಾರದು ಅವರು ಇನ್ನಾದರೂ ಗೌರವದಿಂದ ನಡೆದುಕೊಳ್ಳಬೇಕು ಎಂದು ಟೀಕಿಸಿದರು.

ಚುನಾವಣೆ ಗೆದ್ದು ಕರ್ನಾಟಕವನ್ನು ಖರ್ಗೆಗೆ ಗಿಫ್ಟ್ ಕೊಡುತ್ತೇವೆ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಯಾವುದೊ ಭ್ರಮೆಯಲ್ಲಿದ್ದಾರೆ. ರಾಜ್ಯದ ಜನ ಅವರ ಜೇಬಿನಲ್ಲಿದ್ದಾರೆ ಎಂಬ ಭಾವನೆ ಅವರ ಮನಸ್ಸಲ್ಲಿದ್ದಂತಿದೆ. ಇದು ಅಸಾಧ್ಯವಾದದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವುದು ಎಂದಿಗೂ ಸಾಧ್ಯವಿಲ್ಲ. ಕರ್ನಾಟಕದಲ್ಲಿ 140 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುತ್ತದೆ. ಬಿಜೆಪಿಯ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ನಾನು ಮತ್ತು ಬೊಮ್ಮಾಯಿ ರಾಜ್ಯದಲ್ಲಿ ಪ್ರವಾಸ ಹೊರಟಾಗ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ. ಮೋದಿ ಅವರ ಬೆಂಬಲದೊಂದಿಗೆ ಬಿಜೆಪಿಗೆ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಸಿಗಲಿದೆ. ಇಲ್ಲಿನ ಜನ ಬೆಂಬಲ ಕಂಡಾಗ ಕರಾವಳಿ ಪ್ರದೇಶದಲ್ಲಿ 100 ಕ್ಕೆ ನೂರರಷ್ಟು ನಮ್ಮ ಶಾಸಕರು ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇನ್ನೂ ಬಂಧಿತ ಮುರುಘಾಶ್ರೀ ವಿರುದ್ಧ ಚಾರ್ಜ್ ಶಿಟ್ ಬಗ್ಗೆ ಮಾತನಾಡಿದ ಅವರು, ಮುರುಘಾ ಶರಣರು ಕ್ಷಮಿಸಲಾರದ ಅಕ್ಷಮ್ಯ ಅಪರಾಧ ಮಾಡಿರುವುದು ಇಡೀ ಜಗತ್ತಿಗೆ ಗೊತ್ತಿದೆ. ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆಂದು ಯಾರು ನಿರೀಕ್ಷೆ ಮಾಡಿರಲಿಲ್ಲ. ಇದನ್ನು ಎಲ್ಲರೂ ಖಂಡಿಸಬೇಕು ಹಾಗೂ ಅವರಿಗೆ ತಕ್ಕ ಶಿಕ್ಷೆ ಆಗಬೇಕೆಂದರು.

ಇದೇ ವೇಳೆ ಅವರು ಸಿದ್ದರಾಮಯ್ಯ ಅವರಿಗೆ ನೀವು ಬಾದಾಮಿಯನ್ನು ಯಾಕೆ ಬಿಟ್ಟು ಬರುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು, ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಸೋಲು ನಿಶ್ಚಿತವಾಗಿದೆ. ಎಂಎಲ್‍ಎ ಆಗಿ ಕೆಲವೇ ಮತಗಳಿಂದ ಅಂದು ಗೆದ್ದಿದ್ದೀರಿ. ಆದರೆ ಆನಂತರ ಕ್ಷೇತ್ರವನ್ನು ಮರೆತುಬಿಟ್ಟಿದ್ದೀರಿ. ಬಾದಾಮಿಯನ್ನು ತೊರೆಯುತ್ತೀರಿ ಎಂಬುದು ನಿಮಗೆ ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ. ರಾಜ್ಯದ ಜನ ಈಗಾಗಲೇ ತೀರ್ಮಾನವನ್ನು ಮಾಡಿದ್ದಾರೆ. ಇದಕ್ಕೆ ಜನ ನಿಮಗೆ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಇನ್ನು ಬಿಜೆಪಿಗೆ ಅನೇಕರು ಸೇರ್ಪಡೆಗೊಳ್ಳುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಬೇರೆಬೇರೆ ಪಕ್ಷದಿಂದ ಅನೇಕರು ಈಗಾಗಲೇ ಬಿಜೆಪಿ ಬಂದಿದ್ದಾರೆ ಇನ್ನೂ ಬರುವವರಿದ್ದಾರೆ. ಪಕ್ಷಕ್ಕೆ ಬರುವವರಿಗೆ ಬಿಜೆಪಿ ಯಾವಾಗಲೂ ಸ್ವಾಗತ ಮಾಡುತ್ತದೆ ಎಂದರು.

2 thoughts on “ಮುರುಘಾ ಶ್ರೀ ಇಷ್ಟು ಕೆಳಮಟ್ಟಕ್ಕೆ ಇಳಿತಾರೆ ಎಂದು ಭಾವಿಸಿರಲಿಲ್ಲ: ಬಿಎಸ್ವೈ

  1. ತಳ ಮತ್ತು ತಲೆ ಅರಿಯದಂತೆ ನಟಿಸಬೇಡ. ನಿನ್ನ ಸ್ವಾರ್ಥ ರಾಜಕೀಯ ಎಲ್ಲರಿಗೂ ತಿಳಿದಿದೆ.

  2. ಅವರು ಕೆಳಮಟ್ಟಕ್ಕೆ ಇಳಿದ್ರು. ಸಿಕ್ಕಾಕೊಂಡ್ರು. ಮಾನ ಮೂರುಕಾಸಿಗೆ ಹರಾಜಾಗೋಯ್ತು. ಆದ್ರೆ ತಾವು ಏನೇನೆಲ್ಲಾ ಮಾಡಿ, ಮಾಡಿಸಿ, ಪಾತಾಳಕ್ಕಿಳಿದರೂ ಇನ್ನೂ ಏನೂ ಆಗಿಲ್ಲ, ತಾನೇ ಬಹಳ ಸಾಚಾ ಎಂದು ನಾಟಕ ಆಡ್ತೀರಲ್ಲಾ!

Leave a Reply

Your email address will not be published.

error: Content is protected !!