ಸತೀಶ್ ಜಾರಕಿಹೋಳಿ ಹಿಂದೂ ಅಶ್ಲೀಲ ಹೇಳಿಕೆ : ಸಿಎಂ ಬೊಮ್ಮಾಯಿ ಗರಂ

ಉಡುಪಿ ನ.8(ಉಡುಪಿ ಟೈಮ್ಸ್ ವರದಿ): ಹಿಂದೂ ಶಬ್ದದ ಅರ್ಥ ಅಶ್ಲೀಲವಾಗಿದೆ ಎಂಬ ಸತೀಶ್ ಜಾರಕಿಹೋಳಿ ಅವರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸತೀಶ್ ಜಾರಕಿಹೋಳಿ ಹರೇ ಬರೇ ಓದಿದ ವ್ಯಕ್ತಿ. ಅವರು ಯಾವುದೇ ಆಳವಾದ ಅಧ್ಯಯನ ಇಲ್ಲದೆ ಮಾತನಾಡಿದ್ದಾರೆ. ಸತೀಶ್ ಹೇಳಿಕೆಯಿಂದ ಭಾರತದ ಭಾವನೆಗೆ ಧಕ್ಕೆಯಾಗಿದೆ. ಇದೊಂದು ಪೂರ್ವಗ್ರಹ ಹೇಳಿಕೆ ಮತ್ತು ಯೋಜನಾಬದ್ಧವಾದ ಹೇಳಿಕೆಯಾಗಿದೆ. ಇವರು ಹಿಂದೂ ಭಾವನೆ, ವಿಚಾರ ಮನಸ್ಸಿಗೆ ಘಾಸಿಯಾಗುವ ಹೇಳಿಕೆ ನೀಡಿದ್ದಾರೆ. ರಾಜ್ಯದ ಜನ ಒಕ್ಕೊರಲಿನಿಂದ ಇದನ್ನು ವಿರೋಧಿಸಬೇಕು ಎಂದಿದ್ದಾರೆ.

ಅವರು ಅಲ್ಪಸಂಖ್ಯಾತ ಮತ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ ಎಂದ ಅವರು, ಸತೀಶ್ ಇನ್ನೂ ಸಮರ್ಥನೆ ಮಾಡ್ತಾರೆ ಹುಳಿ ಹಿಂಡುವ ಕೆಲಸ ಮಾಡ್ತಾರೆ. ಕ್ಷೋಭೆಭರಿತ ಹೇಳಿಕೆ ಎಂಬೂದು ದೇಶದ್ರೋಹದ ಕೆಲಸ. ಈ ಬಗ್ಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಯಾಕೆ ಮೌನವಾಗಿದ್ದಾರೆ. ನಿಮ್ಮ ಮೌನ ಸತೀಶ್ ಮಾತಿಗೆ ಸಮ್ಮತಿನಾ..? ಎಂದು ಪ್ರಶ್ನಿಸಿದ್ದಾರೆ. ಹಾಗೂ ದೇಶದಲ್ಲಿ ಕಾಂಗ್ರೆಸ್ ಅಲ್ಪ ಸ್ಪಲ್ಪ ಉಳಿದಿದೆ. ನೆಪಮಾತ್ರದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಜನ ಮೂಲೆಯ ಸ್ಥಾನ ತೋರಿಸ್ತಾರೆ ಎಂದು ಹೇಳಿದ್ದಾರೆ.

Leave a Reply

Your email address will not be published.

error: Content is protected !!