ಕೊಡುವುದಾರೆ ನಿಗಮ ಕೊಡಿ-ಕೋಶ ನಿರ್ಮಾಣದ ಅಗತ್ಯವಿಲ್ಲ: ಸಿಎಂಗೆ ಬಿಲ್ಲವ ಮುಖಂಡರಿಂದ ಮನವಿ

ಕಾಪು ನ.7 : ಬಿಲ್ಲವ ಸಮಾಜದ 26 ಉಪ ಪಂಗಡಗಳನ್ನು ಸೇರಿಸಿಕೊಂಡು ನಿಗಮ ರಚಿಸುವಂತೆ ಆಗ್ರಹಿಸಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಲ್ಲವ ಮುಖಂಡರು ಮನವಿ ಸಲ್ಲಿಸಿದರು.

ಮುಖ್ಯಮಂತ್ರಿಯವರು ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನದ ಹಾಗೂ ಜಿಲ್ಲೆಯ ಬಿಲ್ಲವ ಮುಖಂಡರು ಮನವಿ ಪತ್ರ ಸಲ್ಲಿಸಿದರು. ಹಾಗೂ ಈ ಮನವಿಯಲ್ಲಿ “ಬಿಲ್ಲವ ಸಮಾಜಕ್ಕೆ ಕೋಶ ನಿರ್ಮಾಣದ ಅಗತ್ಯವಿಲ್ಲ-ಕೊಡುವುದಾರೇ ಬಿಲ್ಲವ ಸಮಾಜದ 26 ಉಪಪಂಗಡ ಸೇರಿಸಿಕೊಂಡು ನಿಗಮ ರಚನೆ ಮಾಡಿ” ಎಂದು ತಿಳಿಸಲಾಗಿದೆ.

ಈ ಸಂಧರ್ಭದಲ್ಲಿ ಕ್ಷೇತ್ರಾಧ್ಯಕ್ಷ ಬಿ.ಎನ್ ಶಂಕರ ಪೂಜಾರಿ, ನವೀನ್ ಅಮೀನ್ ಶಂಕರಪುರ, ಶ್ರೀಧರ್, ಗೀತಾಂಜಲಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published.

error: Content is protected !!