ಹಸುವನ್ನು ಭೇಟೆಯಾಡಿದ ಹುಲಿ: ಫೋಟೋ ವೈರಲ್

ಗುಂಡ್ಲುಪೇಟೆ (ಚಾಮರಾಜನಗರ) : ನೆರೆಯ ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣ ಊಟಿಯಲ್ಲಿರುವ ಹಿಂದೂಸ್ತಾನ್ ಫೋಟೋ ಫಿಲ್ಮ್ಸ್ ಬಳಿ ಹುಲಿಯೊಂದು ಹಸುವನ್ನು ಬೇಟೆಯಾಡಿರುವ ಘಟನೆ ನಡೆದಿದೆ.

ಇಂದುನಗರ ಎಂಬ ಜನವಸತಿ ಪ್ರದೇಶವಿದ್ದು ಇಲ್ಲಿನ ನಿವಾಸಿಗಳು ಹುಲಿಯು ಹಸುವಿನ ಕಳೇಬರದ ಬಳಿ ಕುಳಿತಿರುವ ದೃಶ್ಯವನ್ನು ನಿನ್ನೆ ಸೆರೆ ಹಿಡಿದಿದ್ದಾರೆ. ಹುಲಿಯು ಬುಧವಾರ ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಹಸುವನ್ನು ಬೇಟೆಯಾಡಿರಬಹುದು ಎಂದು ಶಂಕಿಸಲಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದೆ.

ಫೋಟೋ ಫಿಲ್ಮ್ಸ್ ಪ್ರದೇಶ ಪ್ರವಾಸಿ ತಾಣವಾಗಿದ್ದು, ಸಾವಿರಾರು ಪ್ರವಾಸಿಗರು ಪ್ರತಿ ದಿನ ಇಲ್ಲಿಗೆ ಭೇಟಿ ನೀಡುತ್ತಾರೆ. ಊಟಿಗೆ ಬರುವವರು ಎಚ್ಚರಿಕೆಯಿಂದ ಇರಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದರು.

ಇದೀಗ ಘಟನೆ ಬಳಿಕ ಕಾಣಿಸಿಕೊಂಡಿರುವ ಹುಲಿಯನ್ನು ಸೆರೆಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆಯು ಹುಲಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದು, ಇದಕ್ಕಾಗಿ ವಿಶೇಷ ತಂಡವನ್ನು ರಚಿಸಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published.

error: Content is protected !!