ಭಾರತ-ಚೀನಾ ನಡುವೆ ಸೇನಾ ಸಂಘರ್ಷದ ಬಗ್ಗೆ ರಾಜತಾಂತ್ರಿಕ ಮಾತುಕತೆ..!
ನವದೆಹಲಿ: ಸೇನಾ ಸಂಘರ್ಷದ ಬಗ್ಗೆ ಭಾರತ ಮತ್ತು ಚೀನಾ ರಾಜತಾಂತ್ರಿಕ ಮಾತುಕತೆ ಪುನರಾರಂಭಿಸಿದೆ. ಈ ಹಿನ್ನೆಲೆ ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಘರ್ಷಣೆ ನಡೆಯಬಹುದಾದ ಎಲ್ಲಾ ಸ್ಥಳಗಳಿಂದಲೂ ಶೀಘ್ರದಲ್ಲೇ ಎರಡೂ ರಾಷ್ಟ್ರಗಳ ಯೋಧರು ಹಿಂದಕ್ಕೆ ಸರಿಯುವ ನಿಟ್ಟಿನಲ್ಲಿ ಕೆಲಸ ಮುಂದುವರಿಸಲು ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.
ಈ ಕುರಿತು ವಿದೇಶಾಂಗ ಇಲಾಖೆ ಆನ್‌ಲೈನ್ ಮುಖಾಂತರ ನಡೆಸಿದ ಸಭೆಯಲ್ಲಿ,”ಎಲ್‌ಎಸಿಯಲ್ಲಿ ನಿಯೋಜನೆಗೊಂಡಿರುವ ಎಲ್ಲ ಯೋಧರನ್ನು ಕೂಡಲೇ ಹಿಂದಕ್ಕೆ ಸರಿಸುವ ನಿಟ್ಟಿನಲ್ಲಿ ಮುಂದಿನ ಹಂತದ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆಯು ತಕ್ಷಣ ನಡೆಯಬೇಕು ಎಂದು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ” ಎಂದು ಮೂಲಗಳು ತಿಳಿಸಿವೆ