ಅಮೃತಸರ: ಶಿವಸೇನೆ ನಾಯಕ ಸುಧೀರ್ ಸೂರಿ ಗುಂಡಿಕ್ಕಿ ಹತ್ಯೆ

ಹೊಸದಿಲ್ಲಿ  ನ.4 : ಶಿವಸೇನೆ ನಾಯಕ ಸುಧೀರ್ ಸೂರಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್ ನ ಅಮೃತಸರದಲ್ಲಿ ನಡೆದಿದೆ.

ಈ ಬಗ್ಗೆ ಮಾಧ್ಯಮ ನೀಡಿರುವ ವರದಿ ಪ್ರಕಾರ, ನಗರದ ದೇವಸ್ಥಾನದ ಹೊರಭಾಗದಲ್ಲಿ ಶಿವಸೇನೆ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಗುಂಪಿನಿಂದ ಯಾರೋ ಅಪರಿಚಿತನೊಬ್ಬ  ಸೂರಿಯತ್ತ ಗುಂಡು ಹಾರಿಸಿದ್ದಾನೆ.

ಗುಂಡು ಹಾರಿದ ಸ್ಥಳ ಜನವಸತಿ ಪ್ರದೇಶ ಎನ್ನಲಾಗಿದ್ದು, ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡುತ್ತಿದ್ದಾಗ ಶಿವಸೇನೆ ನಾಯಕನ ಮೇಲೆ ದಾಳಿ ನಡೆದಿದೆ. ಹಾಗೂ ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇವಾಲಯದ ಆವರಣದ ಹೊರಗೆ ಕಸದ ಬುಟ್ಟಿಯಲ್ಲಿ ಕೆಲವು ಒಡೆದ ವಿಗ್ರಹಗಳು ಪತ್ತೆಯಾದ ನಂತರ ಶಿವಸೇನೆ ಮುಖಂಡರು ದೇವಾಲಯದ ಅಧಿಕಾರಿಗಳ ವಿರುದ್ಧ ಧರಣಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!