ಬಿಜೆಪಿ ಅಧಿಕಾರಕ್ಕೇರಿದ ಮೇಲೆ ವಂಚನೆಗೆ ಅವಕಾಶಗಳು ಇಲ್ಲದಂತಾಗಿದೆ : ಪ್ರಧಾನಿ ಮೋದಿ

ನವದೆಹಲಿ, ನ.3 : ಬಿಜೆಪಿ ಅಧಿಕಾರಕ್ಕೇರಿದ ಮೇಲೆ ಕಳೆದ 8 ವರ್ಷಗಳಲ್ಲಿ ವಂಚನೆಗೆ ಅವಕಾಶಗಳು ಇಲ್ಲದಂತಾಗಿದೆ ಎಂದು ಪ್ರಧಾನಿ ನರೇಂದ್ರ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೌಲಭ್ಯಗಳ ಸುಧಾರಣೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆತ್ಮನಿರ್ಭರದ ಮೂಲಕ ವ್ಯವಸ್ಥೆಗಳ ಬದಲಾವಣೆಗೆ ಶ್ರಮ ವಹಿಸುತ್ತಿದ್ದೇವೆ. ಇದಕ್ಕಾಗಿ ಕಳೆದ ಎಂಟು ವರ್ಷಗಳಿಂದ ತೊಡಗಿಸಿಕೊಂಡಿದ್ದೇವೆ. ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸೃಷ್ಟಿಯಾಗಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಹಗರಣಗಳಿಗೆ ಅವಕಾಶ ಇಲ್ಲದಾಗಿದೆ ಎಂದರು.

ಹಾಗೂ ಕೊರತೆ, ಒತ್ತಡದಿಂದ ಸೃಷ್ಟಿಯಾದ ವ್ಯವಸ್ಥೆ ಬದಲಾವಣೆಗಾಗಿ ಕಳೆದ ಎಂಟು ವರ್ಷಗಳಿಂದ ನಾವು ಕಾರ್ಯೋನ್ಮುಖರಾಗಿದ್ದೇವೆ. ಆತ್ಮನಿರ್ಭರ ಹಾಗೂ ಸೌಲಭ್ಯ ಸುಧಾರಣೆಯೇ ನಮ್ಮ ಆದ್ಯತೆ. ಸರ್ಕಾರ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳು ನೇರವಾಗಿ ಸಿಗುವಂತೆ ಮಾಡುವಲ್ಲಿ ಶ್ರಮಿಸುತ್ತಿದೆ. ನೇರ ನಗದು ವರ್ಗಾವಣೆ ಸೌಲಭ್ಯ ಮೂಲಕ 2 ಲಕ್ಷ ಕೋಟಿ ರೂಗಳಿಗೂ ಅಧಿಕ ಹಣ ನಿಜವಾದ ಫಲಾನುಭವಿಗಳ ಪಾಲಾಗಿದೆ ಎಂದು ತಿಳಿಸಿದರು.

ಪ್ರಾಮಾಣಿಕತೆ, ಪಾರದರ್ಶಕ ಮತ್ತು ಸಾರ್ವಜನಿಕ ಸೇವೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅಂತಹ ಮಹನೀಯರ ಜನ್ಮದಿನದ ಸಂದರ್ಭದಲ್ಲಿ ಜಾಗೃತಿ ಅರಿವು ಸಪ್ತಾಹ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಅವರು ಶ್ಲಾಘಿಸಿದರು.

Leave a Reply

Your email address will not be published. Required fields are marked *

error: Content is protected !!