ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ-ಕೇರಳದ ಶಾಸಕ ರೋಝಿ ಜೋನ್
ಉಡುಪಿ ನ.2 : ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಪಡೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದು, ರಾಜ್ಯದ ಜನರು 40 ಪರ್ಸೆಂಟ್ ಸರಕಾರವನ್ನು ಹೊರಗಿಡಲು ಕಾಯುತ್ತಿದ್ದಾರೆ ಎಂದು ಮೈಸೂರು ವಿಭಾಗದ ಕಾಂಗ್ರೆಸ್ ಉಸ್ತುವಾರಿ, ಕೇರಳದ ಶಾಸಕ ರೋಝಿ ಜೋನ್ ಹೇಳಿದರು.
ಉಡುಪಿಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 40% ಬಿಜೆಪಿ ಸರ್ಕಾರವನ್ನು ಸೋಲಿಸಲು ರಾಜ್ಯದ ಜನರು ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದರು.
ಹಾಗೂ “ಕಾಂಗ್ರೆಸ್ ಪ್ರಜಾಪ್ರಭುತ್ವದ ಆಶಯದ ಮೇಲೆ ನಡೆಯುತ್ತಿದೆ. ಭಾರತ್ ಜೋಡೋ ಮೂಲಕ ಈಗಾಗಲೇ ಕೋಟ್ಯಾಂತರ ಜನರ ನಡುವೆ ಸಾಗಿದ್ದೇವೆ. ಒಡೆದ ಮನಸ್ಸುಗಳನ್ನು ಸೌಹಾರ್ದತೆಯ ಮೂಲಕ ಕಟ್ಟುತ್ತಿದ್ದೇವೆ. ಪ್ರತಿ ರಾಜ್ಯದಲ್ಲಿಯೂ ಅತ್ಯುತ್ತಮ ಬೆಂಬಲ ಸಿಗುತ್ತಿದೆ. ಭಾರತ್ ಜೋಡೋ ಯಾತ್ರೆ ಯಶಸ್ಸಿನತ್ತ ಸಾಗುತ್ತಿದೆ. ಈ ಯಶಸ್ಸನ್ನೂ ಸಹಿಸದ ಬಿಜೆಪಿ ಈ ಯಾತ್ರೆಯ ಬಗ್ಗೆ ಟೀಕೆ ಮಾಡುತ್ತಿದೆ’ ಎಂದು ಹೇಳಿದರು.
ಈ ಸಂದರ್ಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್, ಅಬ್ದುಲ್ ಗಫೂರ್, ಎನ್.ಎಸ್.ಐ.ಐನ ಸೌರಬ್ ಬಲ್ಲಾಳ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.