ಕಾರ್ಕಳ : ಇಂಟರ್ನ್ ಶಿಪ್ ಗೆ ಹೊರಟಿದ್ದ ವಿದ್ಯಾರ್ಥಿ ನಾಪತ್ತೆ
ಕಾರ್ಕಳ ನ.1 (ಉಡುಪಿ ಟೈಮ್ಸ್ ವರದಿ) : ಇಂಟರ್ನ್ ಶಿಫ್ ಗಾಗಿ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ಹೋದ ಕಾರ್ಕಳದ ಎಂಬಿಎ ವಿದ್ಯಾರ್ಥಿಯೋರ್ವ ಅ.31 ರಿಂದ ನಾಪತ್ತೆಯಾಗಿದ್ದಾರೆ.
ಶ್ರೇಯಸ್ (23) ನಾಪತ್ತೆಯಾದ ವಿದ್ಯಾರ್ಥಿ
ಮೂಡಬಿದ್ರೆಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಬಿ.ಎ ವ್ಯಾಸಾಂಗ ಮಾಡುತ್ತಿದ್ದ ಶ್ರೇಯಸ್ ಅ.31 ರಂದು ಬೆಳಿಗ್ಗೆ 10 ಗಂಟೆ ವೇಳೆಗೆ ರಜೆಯಲ್ಲಿ ಇಂಟರ್ನ್ ಶಿಫ್ ಮಾಡಲು ಕಾರ್ಕಳದಿಂದ ಮಂಗಳೂರಿಗೆ ಹೋಗುವುದಾಗಿ ಹೊರಟಿದ್ದರು. ಈ ಹಿನ್ನೆಲೆಯಲ್ಲಿ ಸತೀಶ್ ಎಸ್. ಮಾಬೆನ್ ಅವರು ಕಾರ್ಕಳ ಬಸ್ ನಿಲ್ದಾಣಕ್ಕೆ ಶ್ರೇಯಸ್ ರವರನ್ನು ಬಿಟ್ಟಿ ಬಂದಿದ್ದರು. ಆದರೆ ಶ್ರೇಯಸ್ ರವರು ಸಂಜೆಯಾದರು ಫೋನ್ ಮಾಡದೇ, ಮನೆಗೂ ಬಾರದೇ ಕಾಣೆಯಾಗಿದ್ದಾರೆ. ಈ ಬಗ್ಗೆ ಕಾಲೇಜಿನಲ್ಲಿ ವಿಚಾರಿಸಿದಾಗ ಶ್ರೇಯಸ್ ರವರು ಅಲ್ಲಿಗೆ ಬಂದಿರುವುದಿಲ್ಲವಾಗಿ ತಿಳಿಸಿದ್ದಾರೆ ಎಂಬುದಾಗಿ ಸತೀಶ್ ಎಸ್ ಮಾಬೆನ್ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.