ಉಡುಪಿಯ ಪ್ರಸಾದ್ ನೇತ್ರಾಲಯದಿಂದ ಮುಂಬೈನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
ಮುಂಬೈ ನ.1 (ಉಡುಪಿ ಟೈಮ್ಸ್ ವರದಿ) : ಭಾರತೀಯ ಜನತಾ ಪಾರ್ಟಿ ಮುಬೈ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿ ಟಿಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಐ ಫೌಂಡೇಷನ್ ಬೆಂಗಳೂರು, ಪೀಪಲ್ಸ್ ಮೊಬೈಲ್ ಹಾಸ್ಪಿಟಲ್ ಮುಂಬೈ ಇದರ ಸಂಯುಕ್ತ ಆಶ್ರಯದಲ್ಲಿ ಮುಂಬೈಯ ಗೊರೆಗಾಂವ್ ನ ಪ್ರಜ್ಞಾಭೋದಿನಿ ಶಾಲಾ ವಠಾರದಲ್ಲಿ ಸಾರ್ವಜನಿಕರಿಗಾಗಿ ಉಚಿತ ನೇತ್ರ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣಾ ಶಿಬಿರವು ನಡೆಯಿತು.
ಮುಂಬೈ ಬಿಜೆಪಿ ಅಧ್ಯಕ್ಷ ಹಾಗೂ ಬಿಸಿಸಿಐ ಕೋಶಾಧಿಕಾರಿ ಆಶೀಷ್ ಶೆಲ್ಲಾರ್ ಅವರು ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಅವರು ಡಾ. ಕೃಷ್ಣಪ್ರಸಾದ್ ಕೂಡ್ಲುರವರನ್ನು ಮಹಾರಾಷ್ಟ್ರ ರಾಜ್ಯಕ್ಕೂ ತಮ್ಮ ನೇತ್ರ ಉಚಿತ ಸೇವೆ ವಿಸ್ತರಿಸಿರುವುದನ್ನು ಗುರುತಿಸಿ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕಡಾ. ಕೃಷ್ಣಪ್ರಸಾದ್‍ಕೂಡ್ಲು, ಮುಂಬೈ ಬಿಜೆಪಿ ಕಾರ್ಯದರ್ಶಿ ಶ್ರೀ ವಿನೋದ್ ಶೆಲ್ಲಾರ್, ಕಾರ್ಯಕ್ರಮದ ಮುಖ್ಯ ಸಂಯೋಜಕ ಹಾಗೂ ಮುಂಬೈ ಬಿಜೆಪಿ ಕಾರ್ಯದರ್ಶಿ ಶ್ರೀ ಮೋಹನ ಗೌಡ, ಗೊರೆಗಾಂವ್ ಬಿಜೆಪಿ ಅಧ್ಯಕ್ಷ ಶ್ರೀ ಸಂತೋಷ್, ಪೀಪಲ್ಸ್ ಮೊಬೈಲ್ ಹಾಸ್ಪಿಟಲ್‍ನ ನೇತ್ರತಜ್ಞಡಾ. ಅನಿಲ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಶಿಬಿರದಲ್ಲಿ ಸುಮಾರು 1500ಕ್ಕೂ ಅಧಿಕ ಮಂದಿ ನೇತ್ರ ತಪಾಸಣೆಗೊಳಗಾದರು, 554 ಜನರಿಗೆ ಉಚಿತ ಕನ್ನಡಕ ವಿತರಣೆಗಾಗಿ ಗುರುತಿಸಲಾಯಿತು. 105 ಜನರು ಉಚಿತ ಶಸ್ತ್ರಚಿಕಿತ್ಸೆಗಾಗಿ ಆಯ್ಕೆಯಾದರು.