ಕರ್ನಾಟಕ ರಾಜ್ಯೋತ್ಸವ: ಮಲ್ಪೆ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ
ಮಲ್ಪೆ ನ.1 (ಉಡುಪಿ ಟೈಮ್ಸ್ ವರದಿ): ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಉಡುಪಿ ನಗರಸಭೆ ಸಹಕಾರದೊಂದಿಗೆ ಮಲ್ಪೇ ಬೀಚ್ ಅಭಿವೃದ್ಧಿ ಸಮಿತಿ ವತಿಯಿಂದ ಮಲ್ಪೆ ಬೀಚ್ ನಿಂದ ಸೀ -ವಾಕ್ ವರೆಗಿನ ಕಡಲ ತೀರದ ಸ್ವಚ್ಛತಾ ಕಾರ್ಯಕ್ರಮ ಇಂದು ನಡೆಯಿತು.
ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸಾಧು ಸಾಲ್ಯಾನ್ ರವರು ಕಸ ತೆಗೆಯುವ ಮೂಲಕ ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಸಮಿತಿ ಅಧ್ಯಕ್ಷರಾದ ಪಾಂಡುರಂಗ ಮಲ್ಪೆ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಹಾಗೂ ನಗರ ಸಭಾ ಸದಸ್ಯರಾದ ವಿಜಯ ಕುಂದರ್ ಅವರು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಮಲ್ಪೆಯ ಐದು ಭಜನಾ ಮಂದಿರಗಳಾದ ಶ್ರೀ ಹನುಮಾನ್ ವಿಠೋಬ ಭಜನಾ ಮಂದಿರ ಹನುಮಾನ್ ನಗರ, ಬಾಲಕರ ಶ್ರೀ ರಾಮ ಭಜನಾ ಮಂದಿರ ಕೊಳ, ಶ್ರೀ ಶಿವ ಪಂಚಾಕ್ಷರಿ ಭಜನಾ ಮಂದಿರ ಕೊಳ, ಶ್ರೀ ಜ್ಞಾನ ಜ್ಯೋತಿ ಭಜನಾ ಮಂದಿರ ಕಡಲತೀರ ಮಲ್ಪೆ, ಭಕ್ತಿ ಉದಯ ಶ್ರೀ ಪಂಡರಿನಾಥ ಭಜನಾ ಮಂದಿರ ವಡಭಾಂಡೇಶ್ವರ ಇದರ ಮಾತೃ ಮಂಡಳಿಯ ಸದಸ್ಯರು, ಮಲ್ಪೆ ಬೀಚ್ ನ ಗುತ್ತಿಗೆದಾರರಾದ ಮಂತ್ರ ಟೂರಿಸಮ್ ನ ಸುದೇಶ್ ಶೆಟ್ಟಿ ಮತ್ತು ತಂಡ, ಮಲ್ಪೆ ಬೀಚ್ ಪ್ರವಾಸಿ ಬೋಟ್, ಅಂಗಡಿ ವ್ಯಾಪಾರಸ್ಥರು, ಬೀಚ್ ವ್ಯಾಪಾರಸ್ಥರು ಸೇರಿದಂತೆ ಅನೇಕ ಮಂದಿ ಭಾಗವಹಿಸಿದರು.