ಧರ್ಮಸ್ಥಳ : ನ.8 ರಂದು ಚಂದ್ರಗ್ರಹಣ – ದೇವರ ದರ್ಶನದ ಸಮಯದಲ್ಲಿ ಬದಲಾವಣೆ
ಬೆಳ್ತಂಗಡಿ ನ.1 : ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನ.8 ರಂದು ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ ವಿರುವುದರಿಂದ ಮಧ್ಯಾಹ್ನ 1.30 ರಿಂದ ರಾತ್ರಿ 7 ಗಂಟೆಯವರೆಗೆ ದೇವರ ದರ್ಶನ ಹಾಗೂ ಪೂಜೆಗೆ ಅವಕಾಶ ಇರುವುದಿಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ದೇವಸ್ಥಾನದ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ನ.8 ರಂದು ಮಧ್ಯಾಹ್ನ 1.30 ರವರೆಗೆ ಭೋಜನಾ ವ್ಯವಸ್ಥೆ ಇರಲಿದೆ. ಆ ನಂತರ ಸಂಜೆ 7 ಗಂಟೆ ಬಳಿಕ ಅನ್ನ ಪೂರ್ಣ ಅನ್ನಛತ್ರದಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.