ಮಣಿಪಾಲ: ಬಾಯೋ ಆಮ್ಚೆ ಚೇಡು ಕೊಂಕಣಿ ಚಿತ್ರದ ಆಡಿಯೋ/ಟ್ರೈಲರ್ ಬಿಡುಗಡೆ

ಮಣಿಪಾಲ ನ.1(ಉಡುಪಿ ಟೈಮ್ಸ್ ವರದಿ): ಕಾಮತ್ ಕ್ರಿಯೇಷನ್ಸ್ ರವರ ಆರ್.ಎಸ್.ಬಿ ಕೊಂಕಣಿ ಭಾಷೆಯ ಬಾಯೋ ಆಮ್ಚೆ ಚೇಡು ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಮಣಿಪಾಲದ ಭಾರತ್ ಸಿನಿಮಾದಲ್ಲಿ ಅ.30 ರಂದು ನಡೆಯಿತು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಚಿತ್ರ ಮಂದಿರದ ಒಳಗೆ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಟ್ರೈಲರ್ ಬಿಡುಗಡೆಗೊಳಿಸಲಾಯಿತು. ಕನ್ನಡ ತುಳು ಚಿತ್ರನಟ ಪೃಥ್ವಿ ಅಂಬರ್ ಅವರು ಆಡಿಯೋ ಬಿಡುಗಡೆಗೊಳಿಸಿದರು.

ಈ ವೇಳೆ ಕಾರ್ಯಕ್ರಮದ ಅತಿಥಿ ಗಣ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಡಾ.ಜಗದೀಶ್ ಪೈ, ಗೋಕುಲದಾಸ್ ನಾಯಕ್, ಅಶೋಕ್ ನಾಯಕ್ ಹಿರ್ಗಾನ್, ದಕ್ಷಿಣ ಕನ್ನಡ ಪತ್ರಕರ್ತರ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಶ್ರೀಕಾಂತ್ ನಾಯಕ್, ನವೀನ್ ನಾಯಕ್, ರವೀಂದ್ರ ಪ್ರಭು ಕಡಾರಿ, ಮೋಹಿನಿ ಎನ್, ನಾಯಕ್, ಉಷಾ ನಾಯಕ್ ಹಾಗೂ ಸಮಾಜದ ಹಲವಾರು ಗಣ್ಯರು ಭಾಗವಹಿಸಿದ್ದರು.

ಚಿತ್ರ ನವೆಂಬರ್ 13 ರಂದು ಮಣಿಪಾಲದ ಭಾರತ್ ಸಿನಿಮಾದಲ್ಲಿ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ. ಚಿತ್ರದ ಮುಖ್ಯಪಾತ್ರದಲ್ಲಿ ಇಳಾವಿಟ್ಲಾ ವಿಗ್ನೇಶ್, ಸಹನಾ ಶಿವಾಜಿರಾವ್ ಜಾದವ್, ವಿಜಯ್ ನಾಯಕ್, ಶ್ಯಾಮಲಾ ಕಶ್ಯಪ್, ರೇವತಿ, ಆಶಾ ನಾಯಕ್, ಸೌಜನ್ಯ ನಾಯಕ್, ಕುಸುಮ ಕಾಮತ್, ಶಿವಾನಂದ ನಾಯಕ್ ಕಾಣಿಸಿಕೊಂಡಿದ್ದಾರೆ, ಚಿತ್ರಕ್ಕೆ ರಾಹುಲ್ ವಸಿಷ್ಠ ಸಂಕಲನ ನೀಡಿದ್ದು, ಸುನಾದ್ ಗೌತಮ್ ಅವರ ಛಾಯಾಗ್ರಾಹಣ ಹಾಗೂ ಸಂಗೀತವಿದೆ. ರಂಜದಕಟ್ಟೆ ನಾಗೇಂದ್ರ ಕಾಮತ್ ಅವರು ಚಿತ್ರವನ್ನು ನಿರ್ಮಾಪನ ಮಾಡಿದ್ದು, ರಮಾನಂದ ನಾಯಕ್ ಜೋಡು ರಸ್ತೆ ನಿರ್ದೇಶನ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!