ಗಂಗೊಳ್ಳಿ : ಬ್ಯಾಂಕ್ ಗೆ ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆ

ಗಂಗೊಳ್ಳಿ ನ.1 (ಉಡುಪಿ ಟೈಮ್ಸ್ ವರದಿ) : ಬೈಂದೂರು ತಾಲೂಕಿನ ಮರವಂತೆ ಗ್ರಾಮದ ಮೂಡು ಮರವಂತೆಯ ನಿವಾಸಿಯೊಬ್ಬರು ಅ.25 ರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದಾರೆ.

ವಿಜಯ ಕುಮಾರ್ ಒ (33 ವರ್ಷ) ನಾಪತ್ತೆಯಾದವರು.

ಅ.25 ರ ಬೆಳಿಗ್ಗೆ ತಲ್ಲೂರಿನ ಎಸ್‍ಸಿಡಿಸಿಸಿ ಬ್ಯಾಂಕ್ ಗೆ ಕೆಲಸಕ್ಕೆ ಹೋದವರು ಈ ವರೆಗೂ ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಸಂಬಂಧಿಕರಲ್ಲಿ ಹಾಗೂ ಅವರ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ವಿಜಯ್ ಅವರ ತಂದೆ ಒ. ವಿನಾಯಕ ರಾವ್ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!