ರಾಜ್ಯದಲ್ಲಿ 7 ಬಿಲ್ಲವ ಶಾಸಕರು, ಇಬ್ಬರು ಸಚಿವರಿದ್ದರೂ ಸಮುದಾಯಕ್ಕೆ ಕೊಡುಗೆ ಶೂನ್ಯ-ಡಾ.ಪ್ರಣವಾನಂದ ಸ್ವಾಮೀಜಿ

ಕಾರ್ಕಳ ನ.1 : “ರಾಜ್ಯದಲ್ಲಿ 7 ಮಂದಿ ಶಾಸಕರು ಹಾಗೂ ಇಬ್ಬರು ಬಿಲ್ಲವ ಸಚಿವರಿದ್ದರೂ ಸಮುದಾಯದ ಅಭಿವೃದ್ದಿಗೆ ಕೊಡುಗೆ ಶೂನ್ಯ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ದೇಶದ 16 ರಾಜ್ಯಗಳಲ್ಲಿ 84 ವಿವಿಧ ಹೆಸರಿನಲ್ಲಿ ನಮ್ಮ ಸಮುದಾಯಗಳಿವೆ. ದೇಶಲ್ಲಿ ಶೇ.12ರಷ್ಟು ಕರ್ನಾಟಕದಲ್ಲಿ 70 ಲಕ್ಷ ಜನರಿದ್ದಾರೆ. ರಾಜ್ಯದಲ್ಲಿ 7 ಮಂದಿ ಶಾಸಕರು ಹಾಗೂ ಇಬ್ಬರು ಸಚಿವರಿದ್ದರೂ ರಾಜಕೀಯವಾಗಿ ನಮಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ” ಎಂದರು. ಹಾಗೂ “ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ಕೋಶ ಸ್ಥಾಪಿಸಿ ಬಿಲ್ಲವ ಸಮಾಜದ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ಮೇಲ್ವರ್ಗದ ಸಮುದಾಯದಂತೆ ನಮ್ಮ ಸಮಾಜಕ್ಕೂ ಬ್ರಹ್ಮಶ್ರೀ ನಾರಾಯಣಗುರು ನಿಗಮ ಸ್ಥಾಪಿಸಿ 500 ಕೋಟಿ ರೂ. ಕಾದಿರಿಸಬೇಕು” ಎಂದು ಆಗ್ರಹಿಸಿದರು.

ಈ ವೇಳೆ ಸರಕಾರದಿಂದ ಹಿಂದುಳಿದ ವರ್ಗಗಳ ಹಕ್ಕನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ಸಿಗಂದೂರು ಚೌಡೇಶ್ವರಿ ದೇಗುಲದ ಆಡಳಿತವನ್ನು ಮೇಲ್ವರ್ಗಕ್ಕೆ ನೀಡುವ ಹುನ್ನಾರದಲ್ಲಿ ಸರಕಾರ ಮೂಗು ತೂರಿಸುತ್ತಿರುವುದು, ಬ್ರಹ್ಮಶ್ರೀ ನಾರಾಯಣಗುರು ನಿಗಮ ಸ್ಥಾಪನೆಗೆ ಆಸಕ್ತಿ ವಹಿಸದಿರುವುದು ಹಾಗೂ ಶೇಂದಿ ಉತ್ಪಾದನೆ ಕುರಿತಂತೆ ಸ್ಪಷ್ಟ ಕ್ರಮಕ್ಕೆ ಮುಂದಾಗಿರುವುದು ದುರದೃಷ್ಟ”, ಎಂದರು.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಬಿಲ್ಲವ ಸೇವಾ ಸಮಾಜ ಸಂಘದ ವತಿಯಿಂದ ಸ್ವಾಮೀಜಿ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್ ರಾಜು, ಪ್ರದಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಪುರಸಭೆ ಮಾಜಿ ಅಧ್ಯಕ್ಷ ಸುಭಿತ್ ಕುಮಾರ್, ಚಂದ್ರಹಾಸ ಸುವರ್ಣ, ರಮೇಶ್ ಪೆರ್ಲ, ಜಿತೇಂದ್ರ ಸುವರ್ಣ, ಬಿಪಿನ್ ಚಂದ್ರ ಪಾಲ್ ನಕ್ರೆ, ವಸಂತ ಎಂ., ಸಂದೇಶ್, ಶ್ರೀಕಾಂತ್, ಸಂಪತ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!