ಕೋಟ: ಮೀನುಗಾರ ನೇಣಿಗೆ ಶರಣು

ಕೋಟ ಅ.31(ಉಡುಪಿ ಟೈಮ್ಸ್ ವರದಿ) : ಠಾಣಾ ವ್ಯಾಪ್ತಿಯಲ್ಲಿ ಮೀನುಗಾರರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪ್ರಕಾಶ ಮೊಗವೀರ ( 35 ) ಆತ್ಮಹತ್ಯೆ ಮಾಡಿಕೊಂಡವರು.

ಮೀನುಗಾರಿಕೆ ಹಾಗೂ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಪ್ರಕಾಶ ಅವರು ಸುಮಾರು 10 ವರ್ಷಗಳಿಂದ ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು. ಮದ್ಯ ಸೇವಿಸಿದ ನಂತರ ಈ ಮೊದಲು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ಇದೇ ವಿಚಾರದಲ್ಲಿ ಮನನೊಂದು ವಿಪರೀತ ಮದ್ಯಪಾನ  ಸೇವಿಸಿ ಮನೆಗೆ ಬಂದ ಅವರು ನಿನ್ನ ರಾತ್ರಿಯಿಂದ ಇಂದು ಮಧ್ಯಾಹ್ನದ ಅವಧಿಯಲ್ಲಿ ಮನೆಯಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಅಣ್ಣ ಕೆ. ಸುರೇಶ ಮೊಗವೀರ ಎಂಬವರು ನೀಡಿದ ಮಾಹಿತಿಯಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!