ಪಡುಬಿದ್ರಿ : ತಾಯಿ-ಮಗ ನಾಪತ್ತೆ

ಪಡುಬಿದ್ರಿ ಅ.31 (ಉಡುಪಿ ಟೈಮ್ಸ್ ವರದಿ) : ಪಡುಬಿದ್ರಿಯ ಸುಣ್ಣದ ಗೂಡು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶ್ರೀಕಾಂತ್ ಮರಿಯಪ್ಪ ಹರಿಜನ ಎಂಬವರ ಪತ್ನಿ ತಮ್ಮ ಮಗನೊಂದಿಗೆ ಅ.29 ರಿಂದ ನಾಪತ್ತೆಯಾಗಿದ್ದಾರೆ.

ದೀಪಾ (28) ಹಾಗೂ ಅವರ ಮಗ ಶ್ರೇಯಸ್ ನಾಪತ್ತೆಯಾದವರು.

ಶ್ರೀಕಾಂತ್ ಮರಿಯಪ್ಪ ಹರಿಜನ ಅವರು ದೀಪಾ ಅವರೊಂದಿಗೆ 9 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರ ನಡುವೆ ಹಲವು ಸಮಯದಿಂದ ಜಗಳವಾಗಿದ್ದು 4 ತಿಂಗಳ ನಂತರ ಹಾನಗಲ್ ನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಶ್ರೀಕಾಂತ್ ಅವರ ವಿರುದ್ಧ ದೀಪಾ ಅವರು ದೂರು ನೀಡಿದ್ದರು. ಸಾಂತ್ವನ ಕೇಂದ್ರದಲ್ಲಿ ಬುದ್ದಿವಾದ ಹೇಳಿ ಕಳುಹಿಸಿದ್ದರು. ಬಳಿಕ ದೀಪಾ ಅವರು ಮಗ ಶ್ರೇಯಸ್ ನನ್ನು ಜೊತೆಯಲ್ಲಿ ಕರೆದುಕೊಂಡು ಕೆಲಸಕ್ಕಾಗಿ ಸುಮಾರು 15 ದಿನಗಳ ಹಿಂದೆ ಪಡುಬಿದ್ರಿಗೆ ಬಂದು ಪಡುಬಿದ್ರಿಯ ಸುಣ್ಣದ ಗೂಡು ಎಂಬಲ್ಲಿನ ಇಮ್ತಿಯಾಜ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಶ್ರೀಕಾಂತ್ ಮರಿಯಪ್ಪ ಹರಿಜನ ಅವರು ಪಡುಬಿದ್ರೆಯಲ್ಲಿ ಟಿಪ್ಪರ್ ಲಾರಿ ಚಾಲಕನಾಗಿ ಕೆಲಸಮಾಡಿಕೊಂಡಿದ್ದು, ಅ.22 ರಂದು ಮತ್ತೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದರು. ಆದರೆ ಅ.29 ಬೆಳಿಗ್ಗೆ ಶ್ರೀಕಾಂತ್ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಸಂಜೆ 6:00 ಗಂಟೆ ವೇಳೆ ಹೆಂಡತಿ ಜೊತೆ ಮಾತನಾಡಲು ತಮ್ಮ ಪಕ್ಕದ ಮನೆಯವರಾದ ಬಸವರಾಜ್ ಎಂಬವರಿಗೆ ಕರೆಮಾಡಿದಾಗ. ಮನೆಯಲ್ಲಿ ಯಾರೂ ಇಲ್ಲದಿರುವುದಾಗಿ ತಿಳಿಸಿದ್ದರು. ಕೂಡಲೇ ಶ್ರೀಕಾಂತ್ ಅವರು ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಚಿಲಕ ಹಾಕಿದ್ದು ಮನೆಯ ಒಳಗಡೆ ಹೋದಾಗ ಹೆಂಡತಿ ಮತ್ತು ಮಗನ ಬಟ್ಟೆ ಬರೆಗಳು ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಕ್ಕ ಪಕ್ಕದವರನ್ನು, ಸಂಬಂದಿಕರನ್ನು ವಿಚಾರಿಸಿದಾಗ ಹೆಂಡತಿ ಮತ್ತು ಮಗ ಪತ್ತೆ ಆಗಿರುವುದಿಲ್ಲ. ಅದರಂತೆ ಅ.29 ರಂದು ಬೆಳಿಗ್ಗೆಯಿಂದ ಸಂಜೆವರೆಗಿನ ಅವಧಿಯಲ್ಲಿ ಹೆಂಡತಿ ದೀಪಾ ಮತ್ತು ಮಗ ಶ್ರೇಯಸ್ ಎಂಬವರು ಯಾರಿಗೂ ಹೇಳದೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಮನೆಗೆ ಬಾರದೇ ಹಾಗೂ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!