ಉಡುಪಿ: ಧರ್ಮ ರಕ್ಷಣೆಗಾಗಿ ‘ಯುವಶಕ್ತಿ’ ಸಂಘಟನೆ ಆರಂಭ
ಉಡುಪಿ ಅ.31(ಉಡುಪಿ ಟೈಮ್ಸ್ ವರದಿ): ತಾಯಿ ಹಾಗೂ ತಾಯ್ನಾಡ ರಕ್ಷಣೆ ಮತ್ತು ಧರ್ಮ ರಕ್ಷಣೆಯ ಉದ್ದೇಶದೊಂದಿಗೆ ಉಡುಪಿ ಜಿಲ್ಲೆಯ ಹೆಬ್ರಿಯ ಕುಕ್ಕೆಹಳ್ಳಿಯಿಂದ ಯುವಶಕ್ತಿ ಎಂಬ ಹೊಸ ಸಂಘಟನೆ ಆರಂಭಗೊಂಡಿದೆ.
ಸ್ವಾಮಿ ವಿವೇಕಾನಂದ ಹಾಗೂ ವೀರ ಸಾವರ್ಕರ್ ಅವರ ತತ್ವವನ್ನು ಈ ಸಂಘಟನೆ ಒಳಗೊಂಡಿದ್ದು, ರಕ್ತದಾನ, ಸೇವೆ, ಧರ್ಮ ರಕ್ಷಣೆಯಂತಹ ವಿವಿಧ ಸಮಾಜಮುಖಿ ಕಾರ್ಯದ ಉದ್ದೇಶವನ್ನೂ ಒಳಗೊಂಡಿದೆ. ಈ ಸಂಘಟನೆಯನ್ನು ಸೇರಬೇಕಾದರೆ ಆಸಕ್ತರು https://chat.whatsapp.com/KqD1wAxbud74VXyC49FLcB ಲಿಂಕ್ ನ್ನು ಕ್ಲಿಕ್ ಮಾಡಿ ಸಂಘನೆಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಬಹುದು. ಹಾಗೂ ಯಾವುದೇ ರೀತಿಯಲ್ಲಿ ತುರ್ತು ರಕ್ತದ ಅವಶ್ಯಕತೆ ಇದಲ್ಲಿ ಕೂಡ ಈ ಸಂಘಟನೆಯನ್ನು ಸಂಪರ್ಕಿಸ ಬಹುದು ಎಂದು ಸಂಘಟನೆಯ ಕಾರ್ಯಕರ್ತರು ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ.