ಬೈಂದೂರು : ಕಟಾವಿಗೆ ಬಂದಿದ್ದ 60 ಸಾವಿರ ಮೌಲ್ಯದ ಭತ್ತದ ಫಸಲು ಕಳವು-ದೂರು ದಾಖಲು
ಬೈಂದೂರು ಅ.29 (ಉಡುಪಿ ಟೈಮ್ಸ್ ವರದಿ) : ತಾಲೂಕಿನ ಪಡುವರಿ ಗ್ರಾಮದಲ್ಲಿ ಕೆ. ನಾಗೇಶ ನಾಯ್ಕ ಎಂಬವರ ಗದ್ದೆಯಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ 60 ಸಾವಿರ ಮೌಲ್ಯದ ಭತ್ತದ ಫಸಲನ್ನು ಕಳ್ಳರು ಕಳವುಮಾಡಿರುವ ಘಟನೆ ನಡೆದಿದೆ.
ಸ್ಥಳೀಯ ಕೆ. ನಾಗೇಶ ನಾಯ್ಕ ಎಂಬವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಭತ್ತದ ಫಸಲು ಕಳವಾಗಿದ್ದು, ಇವರು ತಮಗೆ ಭೂ ಮಸೂದೆ ಮಂಜೂರಾತಿ ಆದೇಶದಂತೆ ಬಂದಿದ್ದ ಜಾಗದಲ್ಲಿ ಭತ್ತದ ಕೃಷಿ ಮಾಡಿದ್ದರು. ಅ.23 ರಂದು ಗದ್ದೆಗೆ ಬಂದು ನೋಡುವಾಗ ಫಸಲು ಕಳವಾಗಿರುವುದು ಗಮನಕ್ಕೆ ಬಂದಿದೆ. ಅದರಂತೆ ಅ.22 ರಂದು ರಾತ್ರಿ ವೇಳೆ ಗದ್ದೆಗೆ ನುಗ್ಗಿದ ಕಳ್ಳರು ಕಟಾವಿಗೆ ಬಂದಿದ್ದ 60,000 ರೂ. ಮೌಲ್ಯದ ಭತ್ತದ ಫಸಲನ್ನು ಕಳವುಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಹಾಗೂ ಸ್ಥಳಕ್ಕೆ ಸಂಬಂದಿಸಿದ ನಾಗೇಶ್, ಗಣೇಶ ಮತ್ತು ಅವರ ಕೆಲಸದವರು, ಮನೆಯವರು ಗದ್ದೆಗೆ ಪ್ರವೇಶ ಮಾಡದಂತೆ ನ್ಯಾಯಾಲಯದಲ್ಲಿ ಆದೇಶವಿದ್ದು, ಭತ್ತದ ಫಸಲಿನ ಕಳವಿನಲ್ಲಿ ನಾಗೇಶ ಮತ್ತು ಗಣೇಶನ ಕೈವಾಡ ಇರುವ ಬಗ್ಗೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.