ಉದ್ಯಾವರ ಎಸ್ ಡಿಎಮ್ ಆಯುರ್ವೇದ ಕಾಲೇಜಿನಲ್ಲಿ ಕೋಟಿ ಕಂಠ ಗಾಯನ
ಉಡುಪಿ ಅ.29 (ಉಡುಪಿ ಟೈಮ್ಸ್ ವರದಿ) : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಕುತ್ಪಾಡಿ ಇದರ ಸಂಸ್ಥೆಯಾದ ರತ್ನಶ್ರೀ ಆರೋಗ್ಯಧಾಮದ ಆವರಣದಲ್ಲಿ ಅ.28 ರಂದು ಬೆಳಿಗ್ಗೆ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದ ನಿಮಿತ್ತ ಆಸ್ಪತ್ರೆಯ ಆವರಣವನ್ನು ಕೆಂಪು ಹಾಗೂ ಹಳದಿ ಬಣ್ಣಗಳಿಂದ ಶೃಂಗರಿಸಲಾಯಿತು. ಈ ವೇಳೆ ಸಂಕಲ್ಪ ವಿಧಿ ಬೋಧನೆ ಹಾಗೂ ವಂದನಾರ್ಪಣೆಯ ಮೂಲಕ 30 ನಿಮಿಷಗಳ ಕಾರ್ಯಕ್ರಮವು ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ., ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆಯ ಉಪವೈದ್ಯಕೀಯ ಅಧೀಕ್ಷಕರಾದ ಡಾ. ದೀಪಕ್ ಎಸ್.ಎಮ್., ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ನಿರಂಜನ್ ರಾವ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಎಸ್.ಡಿ.ಎಮ್. ಔಷಧಾಲಯದ ನಿರ್ದೇಶಕರಾದ ಡಾ. ಮುರಳೀಧರ ಬಲ್ಲಾಳ್ ಹಾಗೂ ಸಂಸ್ಥೆಯ ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಡಾ. ವಿಜಯೇಂದ್ರ ಜಿ. ಭಟ್, ಸಂಸ್ಥೆಯ ಕಿರುವೈದ್ಯರು, ಸ್ನಾತಕೋತ್ತರ ವೈದ್ಯರು, ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆ, ಸಂಶೋಧನಾ ಕೇಂದ್ರ ಹಾಗೂ ಔಷಧಾಲಯದ ಸಿಬ್ಬಂದಿಗಳು ಸೇರಿ ಸುಮಾರು 300 ಮಂದಿ ಭಾಗವಹಿಸಿದ್ದರು.