ಉಡುಪಿ: ಯಕ್ಷಗಾನ ಕಲಾವಿದ, ಗ್ಯಾಸ್ ಏಜೆನ್ಸಿಯ ಮಾಲಕ ಮೋಹನ್ ತೋನ್ಸೆ ನಿಧನ
ಉಡುಪಿ ಅ.29 (ಉಡುಪಿ ಟೈಮ್ಸ್ ವರದಿ) : ಪ್ರತಿಭಾನ್ವಿತ ಹವ್ಯಾಸಿ ಚಂಡೆವಾದಕರು, ವೇಷಧಾರಿಯೂ ಆದ ಮೋಹನ್ ತೋನ್ಸೆ ಅವರು ನಿನ್ನೆ ರಾತ್ರಿ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
61 ವರ್ಷದ ಮೋಹನ್ ತೋನ್ಸೆ ಅವರು ಅಲ್ಪ ಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಉಡುಪಿ ಸಂತೆಕಟ್ಟೆಯಲ್ಲಿ ಭಾರತ ಗ್ಯಾಸ್ ಏಜೆನ್ಸಿಯ ಮಾಲಕರಾಗಿದ್ದ ಮೋಹನ್ ತೋನ್ಸೆ ಅವರು ಗಣೇಶೋತ್ಸವ ಸಮಿತಿಯಲ್ಲಿ ಅಧ್ಯಕ್ಷ ರಾಗಿಯೂ ಕಾರ್ಯನಿರ್ವಹಿಸಿದ್ದರು. ಪರಮ ಧಾರ್ಮಿಕರೂ, ಕೊಡುಗೈ ದಾನಿಯೂ ಆಗಿದ್ದ ಇವರು ಯಕ್ಷಗಾನ ಕಲಾರಂಗದ ಆಕಾಶವಾಣಿ ತಂಡದಲ್ಲಿ ಚಂಡೆವಾದಕರಾಗಿ ಕಳೆದ ಎರಡು ದಶಕಗಳಿಂದ ಸೇವೆ ಸಲ್ಲಿಸಿದ್ದರು. ಮೋಹನ್ ತೋನ್ಸೆ ಅವರು ತೋನ್ಸೆ ಜಯಂತ್ ಕುಮಾರ್ ಅವರ ಪ್ರೀತಿಯ ಶಿಷ್ಯರಾಗಿದ್ದರು.