ವಿಮಾನ ಅಪಘಾತದ 11 ದಿನಗಳ ಬಳಿಕ ಪೈಲಟ್ ಮೃತದೇಹ ಪತ್ತೆ
ನವದೆಹಲಿ: ಅರಬ್ಬಿ ಸಮುದ್ರದಲ್ಲಿ ನವೆಂಬರ್ 26 ರಂದು ಮಿಗ್-26 ಕೆ ನೌಕಾ ವಿಮಾನ ಅಪಘಾತಕ್ಕೀಡಾಗಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಪೈಲಟ್‌ನ ದೇಹ ಸುಮಾರು ಹನ್ನೊಂದು ದಿನಗಳ ಬಳಿಕ ಇಂದು (ಡಿ.7)ಪತ್ತೆಯಾಗಿದೆ. ಸಮುದ್ರದಲ್ಲಿ ವಿಮಾನ ಪತನಗೊಂಡ ಬಳಿಕ ನಾಪತ್ತೆಯಾಗಿದ್ದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಅವರಿಗಾಗಿ ವ್ಯಾಪಕ ಹುಡುಕಾಟ ನಡೆಸಲಾಗಿತ್ತು.
ನಿಶಾಂತ್ ಸಿಂಗ್ ಅವರ ಸಹ ಪೈಲಟ್ ವಿಮಾನ ಪತನಗೊಳ್ಳುವ ಮೊದಲು ಅದರಿಂದ ಸುರಕ್ಷಿತವಾಗಿ ಹೊರಗೆ ನೆಗೆಯುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ರಕ್ಷಿಸಲಾಗಿತ್ತು. ಅವರ ಬಳಿಕ ನಿಶಾಂತ್ ಕೂಡ ಜಿಗಿದಿದ್ದರೂ ಅವರ ದೇಹ ಪತ್ತೆಯಾಗಿರಲಿಲ್ಲ. ಘಟನೆ ವೇಳೆ ನಿಶಾಂತ್ ಅವರು ಅದೃಷ್ಟವಶಾತ್ ಬದುಕುಳಿದಿರಬಹುದು ಎಂಬ ಆಶಾವಾದದೊಂದಿಗೆ ತೀವ್ರ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು.
ಆದರೆ,ಇಂದು ಗೋವಾ ಕರಾವಳಿಯಿಂದ ಸುಮಾರು 30 ಮೈಲು ದೂರದಲ್ಲಿ ಸಮುದ್ರದ 70 ಮೀಟರ್ ಆಳದಲ್ಲಿನ ಸೀಬೆಡ್‌ನಲ್ಲಿ ನಿಶಾಂತ್ ಸಿಂಗ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.