ರಾಷ್ಟ್ರಮಟ್ಟದ ಮುಕ್ತ ಟೇಕ್ವಾಂಡೋ ಕ್ರೀಡಾ ಕೂಟ- ಉಡುಪಿ ಜಿಲ್ಲೆಗೆ 41ಚಿನ್ನ- 9ಬೆಳ್ಳಿ ಪದಕ
ಉಡುಪಿ ಅ.28(ಉಡುಪಿ ಟೈಮ್ಸ್ ವರದಿ): ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಸ್ವಾರ್ ಕಪ್ ಪ್ರಥಮ ವರ್ಷದ ರಾಷ್ಟ್ರಮಟ್ಟದ ಮುಕ್ತ ಟೇಕ್ವಾಂಡೋ ಕ್ರೀಡಾ ಕೂಟದಲ್ಲಿ ಉಡುಪಿಯ ಜಿಲ್ಲಾ ಟೇಕ್ವಾಂಡೋ ಆಸೋಸಿಯೇಶನ್ ವಿದ್ಯಾರ್ಥಿಗಳು ಭಾಗವಹಿಸಿ 41 ಚಿನ್ನದ ಪದಕ ಸಹಿತ 50 ಪದಕಗಳನ್ನು ತಮ್ಮಾಗಿಸಿಕೊಂಡಿದ್ದಾರೆ.
ಈ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲಾ ವಿದ್ಯಾರ್ಥಿಗಳು 41 ಚಿನ್ನದ ಪದಕ ಹಾಗೂ 9 ಬೆಳ್ಳಿಯ ಪದಕಗಳನ್ನು ಗೆದ್ದಿದ್ದು, ಪ್ರಶಸ್ತಿ ವಿಜೇತ ಕರಾಟೆ ಪಟುಗಳಿಗೆ ಲಯನ್ಸ್ ಕ್ಲಬ್ ಬ್ರಹಗಿರಿಯ ಜಿಲ್ಲಾ ಸಂಯೋಜಕ ಲಯನ್ ವಾದಿರಾಜ ರಾವ್ ಅವರು ಶಿರಿಬೀಡುವಿನ ಗೌರಿಆರ್ಕೇಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು ರಾಜಶೇಖರ್, ವರುಣ್, ದಾದಪೀರ್, ಸಾಥ್ವಿಕ್, ಸುಜನ್ ಹಾಗೂ ದೇವೇಂದ್ರ ಅವರು ಉಪಸ್ಥಿತರಿದ್ದರು.