ಪಡುಬಿದ್ರೆ : ಬುರ್ಖಾ ಶಾಪ್ ಮಾಲಕ ನಾಪತ್ತೆ
ಪಡುಬಿದ್ರಿ ಅ.28 (ಉಡುಪಿ ಟೈಮ್ಸ್ ವರದಿ) : ಸುರತ್ಕಲ್ ನಲ್ಲಿರುವ ಬುರ್ಖಾ ಶಾಪ್ ನ ಮಾಲಕ ತಂಜಿಲ್ ಮೂಸಾ ಎಂಬವರು ಅ.26 ರಿಂದ ನಾಪತ್ತೆಯಾಗಿದ್ದಾರೆ.
ಕಾಪು ತಾಲೂಕಿನ ನಡ್ಸಾಲು ಗ್ರಾಮದ ತಂಜಿಲ್ ಮೂಸಾ (43) ಅವರು ಹಲವು ಸಮಯದಿಂದ ಸುರತ್ಕಲ್ ನಲ್ಲಿ ಬುರ್ಖಾ ಶಾಪ್ ನಡೆಸಿಕೊಂಡಿದ್ದರು. ಇವರು 2-3 ದಿನಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದು, ಅ.26 ರಂದು ಮಧ್ಯಾಹ್ನ 13.15 ರ ಸುಮಾರಿಗೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಮನೆಗೆ ಬಾರದೇ, ಸುರತ್ಕಲ್‍ನ ಅಂಗಡಿಗೂ ಹೋಗದೇ ಹಾಗೂ ಕಲ್ಲಾಪುವಿನ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. ಈ ಬಗ್ಗ ತಂಜಿಲ್ ಮೂಸಾ ಅವರ ಪತ್ನಿ ಶಬ್ನಮ್ ತಂಜಿಲ್ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.