ಗಂಗೊಳ್ಳಿ : ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ
ಗಂಗೊಳ್ಳಿ ಅ.28 (ಉಡುಪಿ ಟೈಮ್ಸ್ ವರದಿ) : ಇಲ್ಲಿನ ಮ್ಯಾಂಗನೀಸ್ ಜಟ್ಟಿಯಿಂದ ಮೀನುಗಾರಿಕೆಗೆ ಹೊರಟಿದ್ದ ವೇಳೆ ಆಕಸ್ಮಿಕವಾಗಿ ಆಯಾತಪ್ಪಿ ಬೋಟ್ ನಿಂದ ನದಿಗೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರ ರಘುವೀರ್ ತಾಂಡೇಲ ಅವರ ಮೃತದೇಹ ನಿನ್ನೆ ರಾತ್ರಿ ವೇಳೆ ನದಿಯಲ್ಲಿ ಪತ್ತೆಯಾಗಿದೆ.
ಅ.26 ರಂದು ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ರಸ್ತೆಯ ಬಳಿ ಇರುವ ಮ್ಯಾಂಗನೀಸ್ ಜಟ್ಟಿಯಿಂದ ರಘುವೀರ್ ತಾಂಡೇಲ ಅವರು “ಸಾಗರ ದೀಪಾ” ಎಂಬ ಬೋಟ್ ನಲ್ಲಿ ಇತರರೊಂದಿಗೆ ಮೀನುಗಾರಿಕೆಗೆ ಹೊರಟಿದ್ದರು. ಆಗ ಬೋಟ್‍ನಲ್ಲಿ ಕುಳಿತಿದ್ದರವರು ಆಕಸ್ಮಿಕವಾಗಿ ಆಯಾತಪ್ಪಿ ಬೋಟ್ ನಿಂದ ಪಂಚಗಂಗಾವಳಿ ನದಿಯ ನೀರಿಗೆ ಬಿದ್ದು ಕಾಣೆಯಾಗಿದ್ದರು. ಈ ವೇಳೆ ಇವರನ್ನು ನದಿಯಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ನಿನ್ನೆ ರಾತ್ರಿ ವೇಳೆ ಇವರ ಮೃತದೇಹವು ಪಂಚಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮೃತರ ತಮ್ಮ ರಾಜು ತಾಂಡೇಲ ಅವರು ನೀಡಿದ ಮಾಹಿತಿಯಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.