ಉಡುಪಿ : ಲೈಂಗಿಕ ಕಾರ್ಯಕರ್ತರಿಗೆ ನಗರ ಪೊಲೀಸರಿಂದ ಎಚ್ಚರಿಕೆ

ಉಡುಪಿ ಅ.28 : ನಗರದ ಬಸ್ ನಿಲ್ದಾಣಗಳ ಪರಿಸರದಲ್ಲಿ ಲೈಂಗಿಕ ಕಾರ್ಯಕರ್ತರಿಂದ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಇದೀಗ ಉಡುಪಿ ನಗರ ಠಾಣೆಯ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. 

ಈ ನಿಟ್ಟಿನಲ್ಲಿ ನಗರದ ಸರ್ವಿಸ್‌ ಬಸ್‌ ನಿಲ್ದಾಣ ಹಾಗೂ ಹಳೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ದಾಳಿ ಮಾಡಿದ ಪೊಲೀಸರು ಗ್ರಾಹಕರಿಗೆ ಹೊಂಚು ಹಾಕುತ್ತಿದ್ದ ಲೈಂಗಿಕ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ವಾಹನ ಕಂಡು ಕಾರ್ಯಕರ್ತರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಭಾಗದಲ್ಲಿ ಪ್ರತಿ ದಿನ ಮುಂಜಾನೆಯಿಂದ ತಡರಾತ್ರಿವರೆಗೆ ಸಾವಿರಾರು ಮಂದಿ ಕೂಲಿ ಕಾರ್ಮಿಕರು, ಇತರ ಕಡೆಗಳಿಂದ ಕೆಲಸಕ್ಕೆಂದು ಆಗಮಿಸುವವರು, ಪ್ರಯಾಣಿರು, ಸಾರ್ವಜನಿಕರೂ ಹೆಚ್ಚಾಗಿ ಇರುತ್ತಾರೆ. ಇವರ ನಡುವೆ ಇರುವ ಲೈಂಗಿಕ ಕಾರ್ಯಕರ್ತರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಪೊಲೀಸ್‌ ಠಾಣೆಗೂ ಹಲವಾರು ಬಾರಿ ದೂರು ನೀಡಲಾಗಿತ್ತು. ಅಲ್ಲದೆ ಕೆಲವೊಂದು ಖಾಸಗಿ ಹೊಟೇಲ್‌ಗ‌ಳು ಕೂಡ ಇವರಿಗೆ ಮಿತದರದಲ್ಲಿ ಕೊಠಡಿಗಳನ್ನು ನೀಡುತ್ತಿರುವುದರಿಂದ ಕಮಿಷನ್‌ ಆಧಾರದಲ್ಲಿ ಈ ದಂಧೆ ನಗರದಲ್ಲಿ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿದೆ.  ಈ ಬಗ್ಗೆ ಎಚ್ಚರಿಕೆ ನೀಡಿದರೂ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಉಡುಪಿ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!