ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಯೋಧ ಕೆ.ವಿ.ಅಶ್ವಿನ್ ಗೆ ಹುಟ್ಟೂರಲ್ಲಿ ಅಂತಿಮ ನಮನ

ಕಾಸರಗೋಡು, ಅ.24 : ಅರುಣಾಚಲ ಪ್ರದೇಶದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟ ಯೋಧ ಕೆ.ವಿ.ಅಶ್ವಿನ್(24) ಅವರ ಪಾರ್ಥಿವ ಶರೀರವನ್ನು ಇಂದು ಹುಟ್ಟೂರಾದ ಕಾಸರಗೋಡಿನ ಚೆರ್ವತ್ತೂರಿಗೆ ತರಲಾಯಿತು.

ವಿಮಾನದ ಮೂಲಕ ಕಣ್ಣೂರಿಗೆ ತಲುಪಿದ ಮೃತದೇಹವನ್ನು ಬಳಿಕ ಚೆರ್ವತ್ತೂರಿಗೆ ತರಲಾಯಿತು. ಬಳಿಕ ಚೆರ್ವತ್ತೂರು ಕಿಯಕ್ಕಮುರಿಯ ವಾಚನಾಲಯದ ಪರಿಸರದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯ ಸರಕಾರದ ಪರ ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್, ಹಾಗೂ ಮುಖ್ಯಮಂತ್ರಿ ಪರ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಪುಷ್ಪಚಕ್ರ ಅರ್ಪಿಸಿದರು. ಇವರ ಜೊತೆಗೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಇ.ಚಂದ್ರಶೇಖರನ್, ಸಿ.ಎಚ್.ಕುಞ0ಬು, ಟಿ.ಐ.ಮಧುಸೂದನನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯಾರ, ಮಾಜಿ ಸಂಸದ ಪಿ.ಕರುಣಾಕರನ್, ಪಿ.ಕೆ.ಶ್ರೀಮತಿ, ಮಾಜಿ ಶಾಸಕ ಮಾರಯ್ಯ ಕೆ.ಕುಂಞÂರಾಮನ್, ಕೆ.ಪಿ.ಸತೀಶ್ಚಂದ್ರನ್, ಟಿ.ವಿ.ರಾಜೇಶ್, ಕೆ.ಪಿ.ಕುಂಞÂ ಕಣ್ಣನ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್, ಚೆರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಿ.ವಿ.ಪ್ರಮೀಳಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ, ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್, ತಹಶೀಲ್ದಾರ್ ಎನ್. ಮಣಿರಾಜ್, ಕಿನಾನೂರ್ ಕರಿಂದಳ ಮಿಲಿಟರಿ ಅಸೋಸಿಯೇಶನ್ ಮಿಲಿಟರಿ ಅಸೋಸಿಯೇಶನ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳು, ಯುವಕರು ಮತ್ತು ಸ್ವಯಂಸೇವಕ ಸಂಘಟನೆಗಳ ಮುಖಂಡರು ಸೇರಿದಂತೆ ಸಮಾಜದ ವಿವಿಧ ವಲಯಗಳ ಸಾವಿರಾರು ಮಂದಿ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಬಳಿಕ ಪಾರ್ಥಿವ ಶರೀರವನ್ನು ಸ್ವಗೃಹಕ್ಕೆ ತರಲಾಯಿತು. ಮಿಲಿಟರಿ ಅಂತ್ಯಕ್ರಿಯೆಯ ವಿಧಿಗಳ ನಂತರ ಕಿಯಕ್ಕಮುರಿಯ ಮನೆಯ ಪರಿಸರದಲ್ಲಿ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭಗೊಂಡಿತು. ಸೇನಾ ಅಧಿಕಾರಿಗಳು ರಾಷ್ಟ್ರಧ್ವಜ ಹಾಗೂ ಸೈನಿಕರ ಸಮವಸ್ತ್ರವನ್ನು ಪೋಷಕರಾದ ಕೌಸಲ್ಯ ಮತ್ತು ಅಶೋಕ್ ಅವರಿಗೆ ಹಸ್ತಾಂತರಿಸಿದರು. ಡಿಎಸ್‍ಸಿ ಸ್ಟೇಷನ್ ಕಮಾಂಡೆಂಟ್ ಕರ್ನಲ್ ಲೋಕೇಂದ್ರ ಸಿಂಗ್ ನೇತೃತ್ವದಲ್ಲಿ ಯೋಧರು ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆ.ವಿ.ಅಶ್ವಿನ್ ಅವರಿಗೆ ಸೇರಿದ ಸೇನೆಯ ಎಇಎನ್ ಕಾಪ್ರ್ಸ್ ಕ್ಯಾಪ್ಟನ್ ಆರ್.ಯುವರಾಜ್ ನೇತೃತ್ವದಲ್ಲಿ ಆರು ಯೋಧರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!