ಪ್ರಾಕೃತಿಕ ವಿಕೋಪಗಳ, ಪರಸ್ಪರ ಅಪನಂಬಿಕೆ ಭೀತಿ-ಕಂಟಕಗಳಿಂದ ಪಾರಾಗಲು ಜನರು ದೈವದ ಮೊರೆ ಹೋಗಬೇಕು : ಕೋಡಿ ಶ್ರೀ ಭವಿಷ್ಯ
ಅರಸೀಕೆರೆ ಅ.24 : ಪ್ರಾಕೃತಿಕ ವಿಕೋಪಗಳು, ಪರಸ್ಪರ ಅಪನಂಬಿಕೆ ಭೀತಿಗಳು ಉಂಟಾದಲ್ಲಿ ಈ ಕಂಟಕಗಳಿಂದ ಪಾರಾಗಲು ಜನರು ದೈವದ ಮೊರೆ ಹೋಗಬೇಕು ಎಂದು ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಹೇಳಿದ್ದಾರೆ.
ಅರಸಿಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದಲ್ಲಿ ಲೋಕಾ ಕಲ್ಯಾಣಾರ್ಥ ಹಮ್ಮಿಕೊಂಡಿದ್ದ ಮಹಾರುದ್ರ ಯಾಗದ ಬಳಿಕ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪಗಳ ಭೀತಿ ಜತೆಗೆ ಮನುಷ್ಯರು ಪರಸ್ಪರ ಅಪನಂಬಿಕೆಯಿಂದ ತನ್ನ ಮಾನಸಿಕ ಸ್ಥಿರತೆ ಕಳೆದುಕೊಂಡು ಹುಚ್ಚರಂತೆ ವರ್ತಿಸುವುದು ಹಾಗೂ ದೇಹದ ಅಶಕ್ತತೆಯಿಂದ ಬೀದಿಯಲ್ಲಿ ಮೃತಪಡುವ ಕಾಲ ಬರಲಿದೆ. ಈ ಕಂಟಕಗಳಿಂದ ಪಾರಾಗಲು ಜನರು ದೈವದ ಮೊರೆ ಹೋಗಬೇಕು’ ಎಂದು ಹೇಳಿದರು.
ಇದೇ ವೇಳೆ ಅವರು, ರಾಜ ಭೀತಿ, ಯುದ್ಧ ಭೀತಿ ಸೇರಿದಂತೆ ಲೋಕ ಕಂಟಕ, ಪ್ರಾದೇಶಿಕ ಕಂಟಕ, ಭೂಕಂಪದಂತಹ ಕಂಟಕಗಳು ಮನುಕುಲದ ಮೇಲೆ ದುಷ್ಪರಿಣಾಮ ಬೀರಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಹಾಗೂ ಮುಂದಿನ 3 ತಿಂಗಳು ಜಾಗರೂಕತೆಯಿಂದ ಇರಬೇಕು’ ಎಂದು ಸಲಹೆ ನೀಡಿದ್ದಾರೆ.