ನಿವಾರ್, ಬುರೇವಿ ಬಳಿಕ ಗಡಿಯ ರಾಜ್ಯಗಳಿಗೆ ಅರ್ನಬ್ ಚಂಡಮಾರುತ ಭೀತಿ
ಚೆನೈ (ಉಡುಪಿ ಟೈಮ್ಸ್ ವರದಿ): ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ಒಂದರ ಹಿಂದೆ ಚಂಡಮಾರುತಗಳು ಅಪ್ಪಳಿಸುತ್ತಲೇ ಇವೆ. ಇದೀಗ ನಿವಾರ್ ಹಾಗೂ ಬುರೇವಿಯ ಚಂಡ ಮಾರುತಗಳಿಂದ ಚೇತರಿಸಿಕೊಳ್ಳುತ್ತಿದ್ದ ರಾಜ್ಯಗಳಿಗೆ ಅರ್ನಬ್ ಚಂಡಮಾರುತದ ಭೀತಿ ಎದುರಾಗಿದೆ.
ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ ಅರ್ನಬ್ ಚಂಡಮಾರುತ ಎದ್ದಿದ್ದು, ಇಗಾಗಲೇ ಕೇರಳ ಪ್ರವೇಶಿಸಲು ಸಿದ್ದವಾದಂತಿದೆ. ಚಂಡಮಾರುತ ಕೆಲವೇ ದಿನಗಳಲ್ಲಿ ತಮಿಳುನಾಡು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಕೇರಳ ಮತ್ತು ತಮಿಳುನಾಡಿನಲ್ಲಿ ಭೀಕರ ಮಳೆಯಾಗುವ ಸಾಧ್ಯತೆ ಇದ್ದು, ಕರ್ನಾಟಕದ ಮೇಲೂ ಇದು ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.