ಆಕಸ್ಮಿಕವಾಗಿ ಬಾವಿಗೆ ಬಿದ್ದ ಜಿಂಕೆ:ಅರಣ್ಯ ಇಲಾಖೆಯಿಂದ ರಕ್ಷಣೆ
ಕುಂದಾಪುರ: ಕಂದಾವರ ಗ್ರಾಮದ ಹೇರಿಕೆರೆ ಎಂಬಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಜಿಂಕೆಯನ್ನು ಕುಂದಾಪುರ ಅರಣ್ಯ ಇಲಾಖೆಯವರು ರಕ್ಷಿಸಿದ ಘಟನೆ ಇಂದು (ಡಿ.4) ಬೆಳಗ್ಗೆ ನಡೆದಿದೆ.ಹೇರಿಕೆರೆಯ ರಾಜೇಂದ್ರ ಎಂಬವರ ಮನೆಯ ಬಾವಿಗೆ, ನಿನ್ನೆ ರಾತ್ರಿ ಜಿಂಕೆಯೊಂದು ಬಿದ್ದಿದ್ದು, ಜಿಂಕೆಯನ್ನು ಕುಂದಾಪುರ ಅರಣ್ಯ ಇಲಾಖೆಯ ತಂಡ ರಕ್ಷಿಸಿದೆ.
ಈ ಕುರಿತು ವಿಷಯ ತಿಳಿಯುತ್ತಲೆ ಸ್ಥಳಕ್ಕಾಗಮಿಸಿದ ಕುಂದಾಪುರ ಉಪ ವಲಯ ಅರಣ್ಯಾಧಿಕಾರಿ ಉದಯ, ಅರಣ್ಯ ವೀಕ್ಷಕ ಸೋಮಶೇಖರ್, ಅರಣ್ಯ ರಕ್ಷಕ ಉದಯ್, ಚಾಲಕ ಅಶೋಕ್ ಅವರು ಗ್ರಾಮಸ್ಥರೊಂದಿಗೆ ಸೇರಿ ಜಿಂಕೆಯನ್ನು ರಕ್ಷಿಸಿದ್ದಾರೆ. ಜಿಂಕೆಗೆ ಯಾವುದೇ ಗಾಯಗಳಾಗಿಲ್ಲ ಅಲ್ಲದೆ ಭಾವಿಯಲ್ಲಿ ನೀರಿಲ್ಲದ ಪರಿಣಾಮ ಜಿಂಕೆ ಯಾವುದೇ ಅಪಾಯವಿಲ್ಲದೆ ಪಾರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ