ಪೊಲೀಸ್ ಸಿಬ್ಬಂದಿಗೆ ಕಿರುಕುಳ ಆರೋಪ : ಡಿಸಿಪಿ ನಿಶಾ ಜೇಮ್ಸ್ ವರ್ಗಾವಣೆ
ಬೆಂಗಳೂರು ಅ.20 : ಡಿಸಿಪಿ ನಿಶಾ ಜೇಮ್ಸ್ ಅವರ ವಿರುದ್ಧ ಕೇಳಿಬಂದ ಪೊಲೀಸ್ ಕಾನ್ಸ್ ಟೆಬಲ್ ಗಳಿಗೆ ಕಿರುಕುಳ ಆರೋಪದ ಬೆನ್ನಲ್ಲೇ ಇದೀಗ ಅವರನ್ನು ವರ್ಗಾವಣೆ ಮಾಡಿರುವ ಸುದ್ದಿಯೊಂದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕಳೆದ 3 ವರ್ಷದಿಂದ ಕಮಿಷನರ್ ಕಚೇರಿ ಆಡಳಿತ ವಿಭಾಗದ ಡಿಸಿಪಿ ಆಗಿದ್ದ ನಿಶಾ ಜೇಮ್ಸ್ರನ್ನು ಆಂತರಿಕ ಭದ್ರತಾ ವಿಭಾಕ್ಕೆ ಎಸ್. ಪಿಯಾಗಿ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಾಗೂ ಬೆಂಗಳೂರು ನಗರ ಪೊಲೀಸ್ ಆಡಳಿತ ವಿಭಾಗ ಡಿಸಿಪಿ ಯಾಗಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಅವರನ್ನು ನಿಯೋಜನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಿಶಾ ಜೇಮ್ಸ್ 2012ನೇ ಬ್ಯಾಚ್ IPS ಅಧಿಕಾರಿಯಾಗಿದ್ದರು. ಕೆಲ ದಿನಗಳ ಹಿಂದೆ ಇವರ ವಿರುದ್ಧ ಪೊಲೀಸ್ ಕಾನ್ಸ್ ಟೆಬಲ್ ಗಳಿಗೆ ಕಿರುಕುಳ ನೀಡುತ್ತಿರುವ ಆರೋಪಕ್ಕೆ ಸಂಬಂಧಿಸಿ ಆರೋಪಗಳ ಸುರಿಮಳೆಯೇ ಗೈದಿರುವ ದೂರಿನ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.