ಪಿಎಫ್‌ಐ ಸಂಘಟನೆಗೆ ಇಡಿ ಶಾಕ್: ಮನೆ ಕಚೇರಿ ಮೇಲೆ ಅಧಿಕಾರಿಗಳ ದಾಳಿ
ಹೊಸದಿಲ್ಲಿ: ಪಿಎಫ್‌ಐ ಮುಖ್ಯಸ್ಥ ಹಾಗೂ ಪದಾದಿಕಾರಿಗಳಿಗೆ ಇಂದು( ಡಿ.3) ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಮುಖ್ಯಸ್ಥ ಹಾಗೂ ಪದಾಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಪಿಎಫ್ ಐ ಮುಖ್ಯಸ್ಥ ಒಎಂಎ ಸಲಾಮ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ನಸರುದ್ದೀನ್ ಎಲಮರಂ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಿವೆನ್ಶನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ ಪ್ರಕಾರ ಈ ದಾಳಿ ನಡೆಸಲಾಗಿದ್ದು, ಕರ್ನಾಟಕ ಸೇರಿದಂತೆ 9ರಾಜ್ಯಗಳ ಒಟ್ಟು 26 ಸ್ಥಳಗಳಲ್ಲಿ ದಾಳಿ ನಡೆದಿದೆ. ಕೇರಳದ, ತಮಿಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಮತ್ತು ರಾಜಸ್ಥಾನದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ದೆಹಲಿಯಲ್ಲಿ ಸಿಎಎ ವಿರುದ್ಧ ನಡೆದ ಹೋರಾಟದಲ್ಲಿ ಗಲಭೆ ನಡೆಸಲು ಪಿಎಫ್‌ಐ ಹಣ ವರ್ಗಾವಣೆ ಮಾಡಿತ್ತು ಎಂಬ ಆರೋಪದಲ್ಲಿ, ಸಂಘಟನೆಯ ಮುಖ್ಯಸ್ಥ ಮತ್ತು ಆರು ಮಂದಿಯ ಮೇಲೆ, ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.