ಅಲೆವೂರು:ರಸ್ತೆಯಲ್ಲಿ ಬಿದ್ದ ತ್ಯಾಜ್ಯಕ್ಕೆ ಇನ್ನೂ ಸಿಕ್ಕಿಲ್ಲ ಮುಕ್ತಿ

ಉಡುಪಿ( ಉಡುಪಿ ಟೈಮ್ಸ್ ವರದಿ) : ನಮ್ಮ ಉಡುಪಿ ಸ್ವಚ್ಛ ಸುಂದರ ನಗರ.. ಪ್ರಧಾನಿಯವರ ಸ್ವಚ್ಛ ಭಾರತ ಪರಿಕಲ್ಪನೆಯ ಸಾಕಾರಕ್ಕೆ ಕಟಿಬದ್ಧವಾಗಿ ಶ್ರಮಿಸುತ್ತಿರುವ ನಗರಗಳಲ್ಲಿ ಉಡುಪಿಯೂ ಒಂದು ಆದರೆ ಈಗಲೂ ಉಡುಪಿ ನಗರದ ಅಲ್ಲಲ್ಲಿ ಕೆಲವು ಕಡೆ ಸಾರ್ವಜನಿಕ ಸ್ಥಳಗಲ್ಲಿ ತ್ಯಾಜ್ಯಗಳ ರಾಶಿಗಳು ಕಾಣಸಿಗುತ್ತಿರುವುದು ದುರಾದೃಷ್ಟಕರ. ಇದರಿಂದ ಸ್ವಚ್ಛತೆಗೆ ನಾವು ಎಷ್ಟು ಪ್ರಾಮುಖ್ಯತೆ ಕೊಡುತ್ತಿದ್ದೇವೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ.

ಹೌದು.. ಅಲೆವೂರು ಮಣಿಪಾಲ ರಸ್ತೆಯ ಹೊನ್ನೆಕೋಡಿ ಪದವು ಎಂಬಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯಗಳ ರಾಶಿ ಬಿದ್ದಿದ್ದು ಈ ಮಾರ್ಗವಾಗಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉಡುಪಿಯ ತ್ಯಾಜ್ಯವನ್ನು ಅಲೆವೂರಿನ ಡಂಪಿಂಗ್ ಯಾರ್ಡ್ ಗೆ ವಿಲೇವಾರಿ ಮಾಡುವಾಗ ಲಾರಿಯವರು ಈ ಮಾರ್ಗದಲ್ಲಿ ತ್ಯಾಜ್ಯವನ್ನು ಬೀಳಿಸಿಕೊಂಡು ಹೋಗಿದ್ದು, ಸರಿಯಾಗಿ ವಿಲೇವಾರಿ ಮಾಡಿಲ್ಲ.

ಇದರಿಂದ ಈ ಮಾರ್ಗದಲ್ಲಿ ವಾಹನ ಸವಾರರಿಗೆ ಪ್ರಯಾಣಿಸಲು ಅಸಾಧ್ಯ ವಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಇನ್ನಾದರೂ ನಗರಸಭೆ, ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿದ್ದಾರೆ.

Leave a Reply

Your email address will not be published. Required fields are marked *

error: Content is protected !!