ಕುಂದಾಪುರ: ಎಚ್.ಎಮ್.ಎಮ್ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನದ ಸುರಿಮಳೆ
ಕುಂದಾಪುರ (ಉಡುಪಿ ಟೈಮ್ಸ್ ವರದಿ) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿಯಾದ ಪ್ರದ್ಯುಮ್ನ ಕುಂದಾಪುರದ ಕಿರಣ್ ಡ್ರಾಗನ್ ಫಿಸ್ಟ್, ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ದ ವತಿಯಿಂದ ನಡೆದ ಗೋಜು ರಿಯು ಕರಾಟೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು ಬ್ರೌನ್ ಬೆಲ್ಟ್ ಪಡೆದಿರುತ್ತಾರೆ.
ಹಾಗೆಯೇ ಕುಂದಾಪುರದ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ನಡೆದ ಡ್ರಾಯಿಂಗ್ ಸ್ಪರ್ಧೆಯಲ್ಲಿ 5 ನೇ ತರಗತಿಯ ವಿದ್ಯಾರ್ಥಿನಿ ಅವನೀ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಅಂತೆಯೇ ಫ್ರೆಂಡ್ಸ್ ಸರ್ಕಲ್ ಕುಂದಾಪುರ ವತಿಯಿಂದ ನಡೆದ ಪ್ರತಿಭಾ ಪ್ರದರ್ಶನದಲ್ಲಿ ಏಳನೇ ತರಗತಿಯ ವಿದ್ಯಾರ್ಥಿಗಳಾದ ಕೌಸ್ತುಬ್ ಉಡುಪ ಭಾವಗೀತೆಯಲ್ಲಿ ಪ್ರಥಮ ಸ್ಥಾನವನ್ನು, ಅಲನ್ ಕೆ ಬಿಜೋಯ್ ಕ್ವಿಜ್ ನಲ್ಲಿ ದ್ವಿತೀಯ ಸ್ಥಾನವನ್ನು ಮತ್ತು ನಿರಂಜನ್ ಉಡುಪ ಭಾಷಣದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಚಿಂತನಾ ರಾಜೇಶ್, ಉಪಪ್ರಾಂಶುಪಾಲರಾದ ಶುಭಾ ಕೆ ಎನ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ ಮತ್ತು ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್ ವಿಜೇತರನ್ನು ಅಭಿನಂದಿಸಿದರು.