ಮಣಿಪಾಲ: ರವಿತಾ ಜೀವನದಲ್ಲಿ ಬೆಳಕು ಮೂಡಿಸಿದ ಹೊಸಬೆಳಕು ಆಶ್ರಮ
ಉಡುಪಿ ಜೂ.27 (ಉಡುಪಿ ಟೈಮ್ಸ್ ವರದಿ) : ಪರ್ಕಳ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಹೊಸಬೆಳಕು ಸಂಸ್ಥೆ ಹಾಗೂ ಮಣಿಪಾಲ ಪೊಲೀಸ್ ಇಲಾಖೆಯ ಮುಖಾಂತರ ರಕ್ಷಣೆ ಮಾಡಲಾಯಿತು.
ಕಟೀಲು ನಿವಾಸಿ ರವಿತಾ ರಕ್ಷಿಸಲ್ಪಟ್ಟ ಮಹಿಳೆ. ಪರ್ಕಳ ಬಸ್ ನಿಲ್ದಾಣದ ಸಮೀಪ ಮಹಿಳೆ ಬಟ್ಟೆ ಮೇಲೆ ಬಟ್ಟೆ ಧರಿಸಿ ಸೊಂಟದಲ್ಲಿ ಕತ್ತಿ ಹಿಡಿದು ತಿರುಗುತ್ತಿದ್ದರು. ಮಹಿಳೆಯನ್ನು ಕಂಡ ಸಾರ್ವಜನಿಕರು ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಣಿಪಾಲ ಪೊಲೀಸರ ನೇತೃತ್ವದಲ್ಲಿ ಹೊಸಬೆಳಕು ಆಶ್ರಮದ ಸಂಸ್ಥಾಪಕರು ಮಹಿಳೆಯನ್ನು ರಕ್ಷಣೆ ಮಾಡಿ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.
ಈ ವೇಳೆ ಮಹಿಳೆ ತಾನು ಕೆಳೂರಿನವಳು ನನಗೆ ನನ್ನ ಮಾವ ಇದ್ದಾನೆ ಎಂದೂ ಒಂದಿಷ್ಟು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದ್ದು. ಮಹಿಳೆಯ ರಕ್ಷಣೆಯಲ್ಲಿ ಮಣಿಪಾಲ ಪೊಲೀಸ್ ಸಿಬ್ಬಂದಿ ಅಶ್ವಿನಿ, ಹೊಸಬೆಳಕು ಸಂಸ್ಥೆಯ ಸಂಸ್ಥಾಪಕರಾದ ತನುಲಾ ತರುಣ್, ವಿನಯಚಂದ್ರ ಅವರು ಭಾಗವಹಿಸಿದ್ದಾರೆ.