ರಾಯ್ ಪುರ:ಕೊಳವೆಬಾವಿಯಲ್ಲಿ ಸಿಲುಕಿದ್ದ 10 ವರ್ಷದ ಬಾಲಕನ ರಕ್ಷಣೆ
ರಾಯ್ ಪುರ ಜೂ.15 : ಛತ್ತೀಸಗಡದ ಚಾಂಜ್ ಗೀರ್ ಚಂಪಾದ ಪಿಹ್ರಿದ್ ಗ್ರಾಮದಲ್ಲಿ ಕೊಳವೆಬಾವಿಯಲ್ಲಿ ಸಿಲುಕಿದ್ದ 10 ವರ್ಷದ ಬಾಲಕನನ್ನು ಸತತ 100 ಗಂಟೆಗಳ ಕಾರ್ಯಾಚರಣೆಯ ಬಳಿಕ ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ರಾಹುಲ್ ಸಾಹು ರಕ್ಷಿಸಲ್ಪಟ್ಟ ಬಾಲಕ ಜೂ.10 ರಂದು ಮನೆಯ ಬಳಿ ಆಡುತ್ತಿದ್ದ ಬಾಲಕ ರಾಹುಲ್ ಸಾಹು ಕೊಳವೆಬಾವಿಗೆ ಬಿದ್ದಿದ್ದ. ಸುಮಾರು 60 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನಿಗೆ ಉಸಿರಾಟಕ್ಕೆ ಸಹಾಯವಾಗಲೆಂದು ಪೈಪ್ ಮೂಲಕ ಆಮ್ಲಜನಕ ಸರಬರಾಜು ಮಾಡಲಾಯಿತು. ಹಾಗೂ ಬಾಲಕನನ್ನು ರಕ್ಷಿಸಲು ಛತ್ತೀಸಗಡ ಸರ್ಕಾರವು ವಿವಿಧ ಇಲಾಖೆಗಳ ಸುಮಾರು 500 ಸಿಬ್ಬಂದಿಯನ್ನು ನಿಯೋಜಿಸಿತ್ತು. ಸುದೀರ್ಘ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸಲಾಗಿದೆ. ಸದ್ಯ ಬಾಲಕನನ್ನು ಬಿಲಾಸ್ ಪುರದ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ತಜ್ಞ ವೈದ್ಯರ ತಂಡವು ಚಿಕಿತ್ಸೆ ನೀಡುತ್ತಿದ್ದು, ರಾಹುಲ್ ಸಾಹು ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಬಾಲಕ ಇದ್ದ ಅಂಬುಲೆನ್ಸ್ ಕ್ಲಿಪ್ರಗತಿಯಲ್ಲಿ 100 ಕಿಮೀ ದೂರದ ಆಸ್ಪತ್ರೆ ತಲುಪುವಂತೆ ಮಾಡಲು ಗ್ರೀನ್ ಕಾರಿಡಾರ್ ರೂಪಿಸಲಾಗಿತ್ತು.
ಕೊಳವೆ ಬಾವಿಗೆ ಬಿದ್ದ ಬಾಲಕನನ್ನು ಜೀವಂತವಾಗಿ ರಕ್ಷಿಸಿದ ಮೊದಲ ಪ್ರಕರಣ ಇದಾಗಿದ್ದು, 104 ಗಂಟೆಗಳ ಅವಧಿಯ ಈ ಸುದೀರ್ಘ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಪಡೆ, ಸೇನೆ, ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸುಮಾರು 60 ಆಳದಲ್ಲಿ ಸಿಲುಕಿದ್ದ ಬಾಲಕನನ್ನು ಯಶಸ್ವಿ ಕಾರ್ಯಾಚರಣೆಯ ನಂತರ ರಕ್ಷಣಾ ತಂಡವನ್ನು ಮುಖ್ಯಮಂತ್ರಿ ಭೂಪೇಶ್ ಬಾಫೆಲ್ ನನ್ನು ಅಭಿನಂದಿಸಿದ್ದಾರೆ.