ಬೆಂಗಳೂರು: ಇನ್ಸ್ಟಾಗ್ರಾಂ ನಲ್ಲಿ `Sorry’ ಎಂದು ಬರೆದು ಯುವಕ ಆತ್ಮಹತ್ಯೆ
ಬೆಂಗಳೂರು, ಜೂ.2 : ಇನ್ಸ್ಟಾಗ್ರಾಂ ನಲ್ಲಿ `Sorry’ ಎಂದು ಬರೆದು ಯುವಕನೋರ್ವ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ನಡೆದಿದೆ.
ಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ವಿದ್ಯಾರ್ಥಿ ಮನೋಜ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ
ಇನ್ನು ಮನೋಜ್ ಮನೆ ಪಕ್ಕದಲ್ಲೇ ಅಜ್ಜಿ ಮನೆ ಇದ್ದು, ಪ್ರತಿ ದಿನ ಅಜ್ಜಿಯ ಮನೆಗೆ ಹೋಗಿ ಮನೋಜ್ ಮಲಗುತ್ತಿದ್ದ. ಎಂದಿನಂತೆ ಬುಧವಾರ ರಾತ್ರಿ ಕೂಡ ಊಟ ಮುಗಿಸಿ ಮಲಗಲು ಅಜ್ಜಿ ಮನೆಗೆ ಹೋಗಿದ್ದ. ಇಂದು ಬೆಳಗ್ಗೆ 7.30 ಆದರೂ ಮನೋಜ್ ರೂಮಿನಿಂದ ಹೊರ ಬಂದಿರಲಿಲ್ಲ. ಬಳಿಕ ಅನುಮಾನಗೊಂಡ ಪೋಷಕರು ಬಾಗಿಲು ಒಡೆದು ಒಳ ಹೋದಾಗ ಮನೋಜ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ನಿನ್ನೆ ರಾತ್ರಿ ಮನೋಜ್ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘Sorry, chill we all die’ ಎಂದು ಬರೆದುಕೊಂಡಿದ್ದು, ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.