ಗಂಡ ಹೆಂಡತಿ ಸಂಸಾರ ಹಾಳು ಮಾಡಿದ ಮ್ಯಾಗಿ
ಬಳ್ಳಾರಿ ಮೇ 31: ಮ್ಯಾಗಿ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಮ್ಯಾಗಿ ಅಂದರೆ ಹೆಚ್ಚು ಪ್ರೀತಿ. ಆದರೆ ಮ್ಯಾಗಿಯಿಂದಾಗಿ ಯಾರಾದರೂ ವಿಚ್ಛೇದನ ಪಡೆದಿರುವ ವಿಚಿತ್ರ ಪ್ರಕರಣವೊಂದು ಕರ್ನಾಟಕದ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಗಂಡ ಹೆಂಡತಿಯ ವಿಚ್ಛೇದನಕ್ಕೆ ಮ್ಯಾಗಿಯೇ ಕಾರಣವಾಗಿದೆ. ಗಂಡ ಹೆಂಡತಿ ಮೇಲೆ ಮಾಡಿದ ಆರೋಪ ಕೇಳಿ ನ್ಯಾಯಧೀಶರೇ ಹುಬ್ಬೇರಿಸಿದ್ದಾರೆ. ಅಸಲಿಗೆ ಗಂಡ ಹೆಂಡತಿ ಮೇಲೆ ಮಾಡಿದ ಆರೋಪ ಏನೆಂದರೆ ಹೆಂಡತಿ ಪ್ರತಿದಿನ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮ್ಯಾಗಿಯನ್ನೇ ತಯಾರಿಸುತ್ತಾಳಂತೆ. ಇದರಿಂದ ಬೇಸತ್ತ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮೂರು ಬಾರಿ ಮ್ಯಾಗಿ ತಿಂದು ಬೇಸರಗೊಂಡ ಗಂಡ ಸೆಷನ್ಸ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೆಂಡತಿಗೆ ಅಡುಗೆ ಮಾಡುವುದು ಗೊತ್ತಿಲ್ಲ. ಕಲಿಯುವ ಆಸೆಯೂ ಇಲ್ಲ ಎಂದು ಪತಿಯೂ ವಿಚ್ಛೇದನೆಯ ಅರ್ಜಿಯಲ್ಲಿ ಹೇಳಿದ್ದಾರೆ. ಆಕೆಗೆ ಮ್ಯಾಗಿ ಮಾಡುವುದು ಮಾತ್ರ ಗೊತ್ತು. ಪತಿಯ ನೋವನ್ನು ಆಲಿಸಿದ ಕೋರ್ಟ್ ಕೂಡ ಪತಿ-ಪತ್ನಿ ಇಬ್ಬರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನದ ಅರ್ಜಿಯನ್ನು ಸ್ವೀಕರಿಸಿದೆ. ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅವರು ಲೋಕ ಅದಾಲತ್ನಲ್ಲಿ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಶುಕ್ರವಾರ ವೈವಾಹಿಕ ಪ್ರಕರಣಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ನ್ಯಾಯಾಧೀಶ ಎಂ.ಎಲ್.ರಘುನಾಥ್, ‘ಪತಿಯೊಬ್ಬ ತನ್ನ ಹೆಂಡತಿಗೆ ಮ್ಯಾಗಿ ಮಾಡಲು ಮಾತ್ರ ತಿಳಿದಿದೆ ಎಂಬ ಕಾರಣಕ್ಕಾಗಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಅವಳು ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ನೂಡಲ್ಸ್ ತಯಾರಿಸುತ್ತಾಳೆ. ಅವಳು ಪ್ರಾವಿಷನ್ ಸ್ಟೋರ್ನಿಂದ ಕೇವಲ ನೂಡಲ್ಸ್ ಅನ್ನು ಮಾತ್ರ ಖರೀದಿಸುತ್ತಾಳೆ. ಈ ಪ್ರಕರಣಕ್ಕೆ ಮ್ಯಾಗಿ ಕೇಸ್ ಎಂದು ಹೆಸರಿಡಲಾಗಿದೆ ಎಂದು ನ್ಯಾಯಾಧೀಶ ರಘುನಾಥ್ ತಿಳಿಸಿದರು. ಅಂತಿಮವಾಗಿ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದರು ಎಂದು ಅವರು ಹೇಳಿದ್ದಾರೆ.